ವೀರಾಜಪೇಟೆ, ಮಾ. 7: ವೀರಾಜಪೇಟೆ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಜ್ಞಾನ ಗಂಗಾ ಭವನದಲ್ಲಿ ಹೊಸದಾಗಿ ನಿರ್ಮಿಸಿದ ಧ್ಯಾನ ಸಭಾಂಗಣವನ್ನು ತಾ:9ರಂದು ಜರ್ಮನಿಯ ರಾಜಯೋಗ ಸೇವಾ ಕೇಂದ್ರದ ನಿರ್ದೇಶಕರಾದ ಬ್ರಹ್ಮಾಕುಮಾರಿ ಸುದೇಶ್‍ಜೀ ಉದ್ಘಾಟಿಸಲಿರುವುದಾಗಿ ಇಲ್ಲಿನ ಮುಖ್ಯ ಸಂಚಾಲಕಿ ಬಿ.ಕೆ. ಕೋಮಲ ತಿಳಿಸಿದರು.
ಇಲ್ಲಿನ ಪ್ರೆಸ್‍ಕ್ಲಬ್‍ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೋಮಲ ಅವರು ಉದ್ಘಾಟನಾ ಸಮಾರಂಭದಲ್ಲಿ ವೀರಾಜಪೇಟೆ ವಲಯದ ಡಿ.ವೈಎಸ್‍ಪಿ ಸಿ.ಟಿ. ಜಯಕುಮಾರ್, ಹಿರಿಯ ವಕೀಲ ಎಂ.ಕೆ. ಪೂವಯ್ಯ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಭಾಗವಹಿಸಲಿದ್ದು ಸಮಾರಂಭದ ಅಧ್ಯಕ್ಷತೆಯನ್ನು ಬ್ರಹ್ಮಾಕುಮಾರೀಸ್‍ನ ಮೈಸೂರು ಉಪ ವಲಯದ ಮುಖ್ಯ ಸಂಚಾಲಕಿ ಲಕ್ಷ್ಮೀಜಿ ವಹಿಸಲಿದ್ದಾರೆ ಎಂದರು.
ಬ್ರಹ್ಮಾಕುಮಾರೀಸ್‍ನ ಹಿರಿಯ ಸ್ವಯಂ ಸೇವಕ ಬಿ.ಕೆ. ಪೂಣಚ್ಚ ಮಾತನಾಡಿ, ವೀರಾಜಪೇಟೆಯ ಬ್ರಹ್ಮಾಕುಮಾರೀಸ್ ಧ್ಯಾನಮಂದಿರ ಸಭಾಂಗಣದಲ್ಲಿ ಜಾತಿ ಮತ ಭೇದ ಭಾವವಿಲ್ಲದೆ ಎಲ್ಲರಿಗೂ ಅವಕಾಶವಿದೆ. ರಾಜಯೋಗವನ್ನು ಉಚಿತವಾಗಿ ತರಬೇತಿ ನೀಡಲಾಗುವುದು ಎಂದು ಹೇಳಿದರು.
ಗೋಷ್ಠಿಯಲ್ಲಿ ಕಾರ್ಯಕರ್ತ ಎಂ.ಎಂ. ಪೊನ್ನಪ್ಪ ಉಪಸ್ಥಿತರಿದ್ದರು.