ಕೂಡಿಗೆ, ಮಾ. 8: ಎಂ.ಜಿ. ಪದ್ಮನಾಭ ದತ್ತಿ ನಿಧಿ ಕಾರ್ಯಕ್ರಮ ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕಲಾವಿದರು-ಲೇಖಕರ ಬಳಗ ಪ್ರಮುಖ ಕೇಶವ ಕಾಮತ್ ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಅಧ್ಯಕ್ಷ ಲೋಕೇಶ್ ಸಾಗರ್ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಮಣಜೂರು ಮೂರ್ತಿ, ಆಡಳಿತ ಮಂಡಳಿ ಅಧ್ಯಕ್ಷ ಹೆಚ್.ಎಲ್. ರಮೇಶ್ ಮಾತನಾಡಿದರು.
ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ರಂಗಸ್ವಾಮಿ ದತ್ತಿನಿಧಿ ಬಗ್ಗೆ ಮಾತನಾಡಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಹೆಚ್.ಎಸ್. ಗಣೇಶ್ ಉಪಸ್ಥಿತರಿದ್ದರು.
ಸಿ.ಡಿ. ಲೋಕೇಶ್ ನಿರೂಪಿಸಿದರು. ಪಾಂಡುರಂಗ ಸ್ವಾಗತಿಸಿದರು. ಡಿ. ಕವಿತಾ ವಂದಿಸಿದರು.