ಮಡಿಕೇರಿ, ಮಾ. 8: ಮನುಷ್ಯ ತನ್ನ ಜೀವಿತದ ಅವಧಿಯಲ್ಲಿ ತನ್ನ ಸಮಾಜಕ್ಕಾಗಿ ಮಾಡುವ ಸೇವೆ ಮತ್ತು ತ್ಯಾಗದಿಂದಾಗಿ ಬಲಿಷ್ಠ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಆರೋಗ್ಯ ಭಾರತಿ ಸಂಘಟನೆಯ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಡಾ.ಚಂದ್ರಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಮಡಿಕೇರಿ ನಗರದ ಭಾರತೀಯ ವಿದ್ಯಾಭವನದಲ್ಲಿ ಸೇವಾ ಭಾರತಿ ವತಿಯಿಂದ ಸಂತ್ರಸ್ತ ಕುಟುಂಬದ ವಿದ್ಯಾರ್ಥಿಗಳು ಪೋಷಕರು ಮತ್ತು ಸ್ವಯಂಸೇವಕರ ಸ್ನೇಹಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮನುಷ್ಯ ಹುಟ್ಟುವಾಗ ಶೂನ್ಯ, ಸಾಯುವಾಗಲೂ ಶೂನ್ಯ. ಜೀವಿತಾವಧಿಯಲ್ಲಿ ಸಾವಿರಾರು ಆಸೆ-ಆಕಾಂಕ್ಷೆಗಳು ಮನಸ್ಸಿನಲ್ಲಿ ಮೂಡುತ್ತವೆ. ಆದರೆ ನಮ್ಮ ಜೀವಿತದ ಅವಧಿಯಲ್ಲಿ ಸಮಾಜಕೋಸ್ಕರ ಬದುಕುವುದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಭೌತಿಕ ಸುಖಕ್ಕಿಂತ ಜೀವನದಲ್ಲಿ ಆಧ್ಯಾತ್ಮಿಕ ಸುಖವನ್ನು ಜೀವನದಲ್ಲಿ ಅನುಭವಿಸಬೇಕು. ತನ್ನನ್ನು ತಾನು ಅರಿತುಕೊಳ್ಳಲು ಯೋಗ ಧ್ಯಾನದಂತಹ ಅಭ್ಯಾಸವನ್ನು ಮೈಗೂಡಿಸಿಕೊಳ್ಳಬೇಕು. ಗುಜರಾತಿನಲ್ಲಿ ಕಚ್ ನಲ್ಲಿ ಕೆಲ ವರ್ಷಗಳ ಹಿಂದೆ ಸಂಭವಿಸಿದ ಭೂಕಂಪ ದುರಂತದ ಸಂದರ್ಭ ಭಿಕ್ಷೆ ಬೇಡುವ ಮಹಿಳೆ ಕೂಡ ತಾನು ಸಂಗ್ರಹಿಸಿದ ಆಹಾರಪದಾರ್ಥಗಳನ್ನು ಸಂತ್ರಸ್ತರಿಗೆ ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ. ದುರಂತದಂತಹ ಸಂದರ್ಭಗಳಲ್ಲಿ ಮಾತ್ರ ಜಾತಿಗಳ ಮಧ್ಯೆ ಕೊಂಡಿಯನ್ನು ಬೆಸೆಯಬಾರದು. ಜಾತಿ ಜಾತಿಗಳ ಮಧ್ಯೆ ಸಾಮರಸ್ಯ ಅಗತ್ಯ. ಸರ್ವಸ್ಪರ್ಶಿ ಸರ್ವವ್ಯಾಪಿಯಾಗಿ ನಮ್ಮ ಸಂಬಂಧವನ್ನು ರೂಪಿಸಿಕೊಳ್ಳುವ ಮೂಲಕ ಸಂಬಂಧವನ್ನು ಇನ್ನಷ್ಟು ಗಟ್ಟಿ ಮಾಡಿಕೊಳ್ಳಬೇಕು. ವ್ಯಕ್ತಿ ನಿರ್ಮಾಣದ ಮೂಲಕ ಸಮಾಜಕಾರ್ಯಕ್ಕೆ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸೇವಾ ಭಾರತಿ ಅಧ್ಯಕ್ಷರಾದ ಟಿ.ಸಿ.ಚಂದ್ರನ್ ಪ್ರಾಸ್ತಾವಿಕವಾಗಿ ಮಾತನಾಡಿ ಸೇವಾಭಾರತಿ ಸ್ವಯಂಸೇವಕರು ಮತ್ತು ವಿವಿಧ ಸಂಘ ಸಂಸ್ಥೆಗಳ ಸ್ವಯಂಸೇವಕರು ಪ್ರಕೃತಿ ವಿಕೋಪ ಸಂದರ್ಭ ಸೇವಾಕಾರ್ಯ ಮಾಡಿದ್ದಾರೆ. ಸಮಾಜದ ಎಲ್ಲರೂ ತನ್ನವರು ಅನ್ನುವ ಮನೋಭಾವದಿಂದ ಸ್ವಯಂಸೇವಕರು ಮಡಿಕೇರಿ, ಮಾ. 8: ಮನುಷ್ಯ ತನ್ನ ಜೀವಿತದ ಅವಧಿಯಲ್ಲಿ ತನ್ನ ಸಮಾಜಕ್ಕಾಗಿ ಮಾಡುವ ಸೇವೆ ಮತ್ತು ತ್ಯಾಗದಿಂದಾಗಿ ಬಲಿಷ್ಠ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಆರೋಗ್ಯ ಭಾರತಿ ಸಂಘಟನೆಯ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಡಾ.ಚಂದ್ರಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಮಡಿಕೇರಿ ನಗರದ ಭಾರತೀಯ ವಿದ್ಯಾಭವನದಲ್ಲಿ ಸೇವಾ ಭಾರತಿ ವತಿಯಿಂದ ಸಂತ್ರಸ್ತ ಕುಟುಂಬದ ವಿದ್ಯಾರ್ಥಿಗಳು ಪೋಷಕರು ಮತ್ತು ಸ್ವಯಂಸೇವಕರ ಸ್ನೇಹಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮನುಷ್ಯ ಹುಟ್ಟುವಾಗ ಶೂನ್ಯ, ಸಾಯುವಾಗಲೂ ಶೂನ್ಯ. ಜೀವಿತಾವಧಿಯಲ್ಲಿ ಸಾವಿರಾರು ಆಸೆ-ಆಕಾಂಕ್ಷೆಗಳು ಮನಸ್ಸಿನಲ್ಲಿ ಮೂಡುತ್ತವೆ. ಆದರೆ ನಮ್ಮ ಜೀವಿತದ ಅವಧಿಯಲ್ಲಿ ಸಮಾಜಕೋಸ್ಕರ ಬದುಕುವುದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಭೌತಿಕ ಸುಖಕ್ಕಿಂತ ಜೀವನದಲ್ಲಿ ಆಧ್ಯಾತ್ಮಿಕ ಸುಖವನ್ನು ಜೀವನದಲ್ಲಿ ಅನುಭವಿಸಬೇಕು. ತನ್ನನ್ನು ತಾನು ಅರಿತುಕೊಳ್ಳಲು ಯೋಗ ಧ್ಯಾನದಂತಹ ಅಭ್ಯಾಸವನ್ನು ಮೈಗೂಡಿಸಿಕೊಳ್ಳಬೇಕು. ಗುಜರಾತಿನಲ್ಲಿ ಕಚ್ ನಲ್ಲಿ ಕೆಲ ವರ್ಷಗಳ ಹಿಂದೆ ಸಂಭವಿಸಿದ ಭೂಕಂಪ ದುರಂತದ ಸಂದರ್ಭ ಭಿಕ್ಷೆ ಬೇಡುವ ಮಹಿಳೆ ಕೂಡ ತಾನು ಸಂಗ್ರಹಿಸಿದ ಆಹಾರಪದಾರ್ಥಗಳನ್ನು ಸಂತ್ರಸ್ತರಿಗೆ ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ. ದುರಂತದಂತಹ ಸಂದರ್ಭಗಳಲ್ಲಿ ಮಾತ್ರ ಜಾತಿಗಳ ಮಧ್ಯೆ ಕೊಂಡಿಯನ್ನು ಬೆಸೆಯಬಾರದು. ಜಾತಿ ಜಾತಿಗಳ ಮಧ್ಯೆ ಸಾಮರಸ್ಯ ಅಗತ್ಯ. ಸರ್ವಸ್ಪರ್ಶಿ ಸರ್ವವ್ಯಾಪಿಯಾಗಿ ನಮ್ಮ ಸಂಬಂಧವನ್ನು ರೂಪಿಸಿಕೊಳ್ಳುವ ಮೂಲಕ ಸಂಬಂಧವನ್ನು ಇನ್ನಷ್ಟು ಗಟ್ಟಿ ಮಾಡಿಕೊಳ್ಳಬೇಕು. ವ್ಯಕ್ತಿ ನಿರ್ಮಾಣದ ಮೂಲಕ ಸಮಾಜಕಾರ್ಯಕ್ಕೆ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸೇವಾ ಭಾರತಿ ಅಧ್ಯಕ್ಷರಾದ ಟಿ.ಸಿ.ಚಂದ್ರನ್ ಪ್ರಾಸ್ತಾವಿಕವಾಗಿ ಮಾತನಾಡಿ ಸೇವಾಭಾರತಿ ಸ್ವಯಂಸೇವಕರು ಮತ್ತು ವಿವಿಧ ಸಂಘ ಸಂಸ್ಥೆಗಳ ಸ್ವಯಂಸೇವಕರು ಪ್ರಕೃತಿ ವಿಕೋಪ ಸಂದರ್ಭ ಸೇವಾಕಾರ್ಯ ಮಾಡಿದ್ದಾರೆ. ಸಮಾಜದ ಎಲ್ಲರೂ ತನ್ನವರು ಅನ್ನುವ ಮನೋಭಾವದಿಂದ ಸ್ವಯಂಸೇವಕರು ಕೆಲಸ ಮಾಡಿದ್ದಾರೆ. ಈ ಸಂಸ್ಕಾರವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂತಹ ಸೇವಾ ಕಾರ್ಯವನ್ನು ನಮ್ಮ ನಮ್ಮ ಗ್ರಾಮಗಳಲ್ಲಿ ಮಾಡುವ ಮೂಲಕ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿ ರೂಪುಗೊಳ್ಳಬೇಕು ಎಂದು ಹೇಳಿದರು. ಇದೇ ಸಂದರ್ಭ ನೆಲ್ಲಿಹುದಿಕೇರಿಯ ಶ್ರೀ ಮುತ್ತಪ್ಪ ಕಲಾ ವೇದಿಕೆಯ ಅಭಿಷೇಕ್ ಅವರು ಕಲಾ ವೇದಿಕೆ ಆಶ್ರಯದಲ್ಲಿ ನಿರ್ವಹಿಸಿದ ನಿರಾಶ್ರಿತರ ಶಿಬಿರದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು.

ಸೇವಾಭಾರತಿ ಕಚೇರಿ ಕಾರ್ಯದರ್ಶಿ ಚಂದ್ರ ಉಡೋತ್ ಕಳೆದ ವರ್ಷಗಳ ವರದಿಯನ್ನು ಸಭೆಯ ಮುಂದಿಟ್ಟು 2018-19 ಮತ್ತು 2019-20 ರಲ್ಲಿ ರಾಜ್ಯದ ಬೇರೆ ಬೇರೆ ಕಾಲೇಜುಗಳಲ್ಲಿ ಪದವಿ ಎಂಬಿಎ ಮೆಡಿಕಲ್ ಎಂಜಿನಿಯರಿಂಗ್ ಡಿಪ್ಲೊಮಾ ವಿದ್ಯಾಭ್ಯಾಸ ಮಾಡುತ್ತಿರುವ ಒಟ್ಟು 52 ಮಂದಿ ನಿರಾಶ್ರಿತ ವಿದ್ಯಾರ್ಥಿಗಳಿಗೆ ರೂ.21,35,561 ಮೊತ್ತದ ಸಹಾಯಧನವನ್ನು ವಿತರಿಸಲಾಗಿದೆ. ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ವಿದ್ಯಾಸಂಸ್ಥೆಗಳಲ್ಲಿ ಪ್ರಾಥಮಿಕ ಶಿಕ್ಷಣದಿಂದ ಎಂಬಿಎಂಬಿ ಎಲ್.ಎಲ್.ಬಿ ವರೆಗೆ 2018-19 ಮತ್ತು 2019-20 ರಲ್ಲಿ ಒಟ್ಟು 61 ಮಂದಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ರೂ 29,28,384 ವೆಚ್ಚವಾಗಿದೆ. 9 ಸಂತ್ರಸ್ತ ಕುಟುಂಬಗಳಿಗೆ 14,97,000 ವೆಚ್ಚದಲ್ಲಿ ಮನೆ ದುರಸ್ತಿ ಮತ್ತು ಸಹಾಯಧನವನ್ನು ವಿತರಿಸಲಾಗಿದೆ.

2019-20 ರಲ್ಲಿ ನೆಲ್ಲಿಹುದಿಕೇರಿ ಸಮೀಪದ ಕುಂಬಾರಗುಂಡಿ ಗ್ರಾಮದ ಇಬ್ಬರು ನಿರಾಶ್ರಿತ ಕುಟುಂಬದ ಹೆಣ್ಣು ಮಕ್ಕಳ ಮದುವೆಗೆ ರೂ. 35,000 ಹಾಗೂ ಮೈಸೂರಿನ ಸೇವಾ ಭಾರತಿ ಸಹಯೋಗದೊಂದಿಗೆ ಮಡಿಕೇರಿ ತಾಲೂಕಿನ 7 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಲೇಖನಿ ಸಾಮಾಗ್ರಿಗಳನ್ನು ವಿವರಿಸಲಾಗಿದೆ. ಸೇವಾ ಭಾರತಿ ಸಂಸ್ಥೆಯು ಈ ರೀತಿಯ ಸೇವೆಗೆ ಸದಾ ಸಿದ್ಧವಿದ್ದು, ಸಮಾಜದ ಬಂಧುಗಳು ಸೇವಾ ಭಾರತಿ ಸಂಸ್ಥೆಯೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.

ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಸಂಘಚಾಲಕ್ ಚಕ್ಕೇರ ಮನು ಕಾವೇರಪ್ಪ, ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಟ್ರಸ್ಟಿ ನ.ಸೀತಾರಾಮ್ ಉಪಸ್ಥಿತರಿದ್ದರು.

ಈ ಸಂದರ್ಭ ಆರೋಹಣ ಕೊಡಗು ತಂಡದ ಅಧ್ಯಕ್ಷ ನವೀನ್ ನೆಲ್ಲಿಹುದಿಕೇರಿ ಶ್ರೀ ಮುತ್ತಪ್ಪ ಕಲಾ ವೇದಿಕೆಯ ಪದಾಧಿಕಾರಿಗಳಾದ ಪದ್ಮನಾಭ, ರೋಟರಿ ಸಂಸ್ಥೆಯ ಅಜಯ್ ಸೂದ್ ಹಾಗೂ ನಿರಾಶ್ರಿತ ಕುಟುಂಬದ ವಿದ್ಯಾರ್ಥಿಗಳು, ಪೋಷಕರು, ಸ್ವಯಂಸೇವಕರು ಪಾಲ್ಗೊಂಡಿದ್ದರು. ಪದ್ಮಪ್ರಿಯ ಮತ್ತು ನಿಹಾರಿಕಾ ಪ್ರಾರ್ಥಿಸಿ, ಸೇವಾ ಭಾರತಿ ಉಪಾಧ್ಯಕ್ಷ ಕೆ.ಕೆ.ಮಹೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರೆ ಖಜಾಂಜಿ ಡಿ. ಎಚ್ ತಮ್ಮಪ್ಪ ಸ್ವಾಗತಿಸಿ ಕಾರ್ಯದರ್ಶಿ ತಿರುಮಲೇಶ್ ಭಟ್ ವಂದಿಸಿದರು.