ಮಡಿಕೇರಿ, ಮಾ. 8: ಮಾ. 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ವಿಶೇಷತೆ, ಈ ದಿನದಂದು ಹಾಗೂ ಮುಂದಿನ ದಿನಗಳಲ್ಲಿ ಬಗೆ ಬಗೆಯ ಕಾರ್ಯ ಕ್ರಮಗಳ ಮೂಲಕ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಪ್ರಸಕ್ತ ವರ್ಷ ಮಾ.8 ಭಾನುವಾರ ರಜಾದಿನವಾಗಿ ಬಂದ ಕಾರಣದಿಂದ ಎಂಬಂತೆ ಈ ದಿನ ಜಿಲ್ಲೆಯಲ್ಲಿ ಹೆಚ್ಚು ಕಾರ್ಯಕ್ರಮಗಳೂ ನಡೆಯದೆ ಬೇರೆ ದಿನಾಂಕ ಇದಕ್ಕೆ ನಿಗದಿಯಾಗಿದೆ, ಜಿಲ್ಲಾಡಳಿತ, ಮಹಿಳಾ ಒಕ್ಕೂಟಗಳು ಸೇರಿದಂತೆ ವಿವಿಧ ಸ್ವಸಹಾಯ ಸಂಘಗಳು ಇನ್ನಿತರ ಮಹಿಳಾ ಸಂಘಟನೆಗಳ ಕಾರ್ಯಕ್ರಮಗಳೂ ಈ ತಿಂಗಳಿನ ಬೇರೆ ಬೇರೆ ದಿನಗಳಲ್ಲಿ ಜರುಗಲಿದೆ ಎಂದು ತಿಳಿದು ಬಂದಿದೆ. ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ಇಂದು ಜೂನಿಯರ್ ಕಾಲೇಜ್ ಆವರಣದಲ್ಲಿರುವ ಫೀ.ಮಾ. ಕಾರ್ಯಪ್ಪ ಸಭಾಂಗಣದಲ್ಲಿ ವಿವಿಧ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಮಹಿಳಾ ದಿನದ (ಪೊಮ್ಮಕ್ಕಡದಿನ) ಸಂಭ್ರಮಾಚರಣೆ ನಡೆಯಿತು. ಇದರೊಂದಿಗೆ ವೀರಾಜಪೇಟೆಯ ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್‍ನಿಂದ ಮಡಿಕೇರಿ ಪತ್ರಿಕಾಭವನದಲ್ಲಿ ಕಾರ್ಯಕ್ರಮ ನಡೆಯಿತು. ಮಡಿಕೇರಿ ಸಮಾಜದ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಹಾಗೂ ಹಿರಿಯ ಬ್ಯಾಡ್ ಮಿಂಟನ್ ಆಟಗಾರ್ತಿ ತಾತಪಂಡ ಜೋತಿ ಸೋಮಯ್ಯ ಉದ್ಘಾಟಿಸಿ ಮಹಿಳೆಯರು ಎಲ್ಲಾ ಕ್ಷೇತ್ರದÀಲ್ಲೂ ಮುಂದೆ ಬರುವಂತೆ ಕರೆ ನೀಡಿದರು.

ಥ್ರೋಬಾಲ್, ಶೆಟಲ್, ಹಗ್ಗಜಗ್ಗಾಟ ಸೇರಿದಂತೆ ವೈವಿಧ್ಯಮಯ ಕ್ರೀಡೆಗಳ ಮೂಲಕ ದಿನವಿಡೀ ಕಾರ್ಯಕ್ರಮ ಜರುಗಿತು. ಪೊಮ್ಮಕ್ಕಡಕೂಟದ ಅಧ್ಯಕ್ಷ ಕನ್ನಂಡ ಕವಿತಾ ಬೊಳ್ಳಪ್ಪ ಹಾಗೂ ಪದಾಧಿಕಾರಿಗಳು ಕ್ರೀಡಾಕೂಟವನ್ನು ಆಯೋಜಿಸಿದ್ದರು.

ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್

ಅಖಿಲ ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಪೊಮ್ಮಕ್ಕಡ ನಾಳ್ ಕಾರ್ಯಕ್ರಮ ನಡೆಯಿತು.

ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ರಾಣು ಅಪ್ಪಣ್ಣ ಅವರು, ದೇಶ ಹಾಗೂ ವಿದೇಶದಲ್ಲಿ ಹಿಂದೆ ಹೆಣ್ಣನ್ನು ತುಚ್ಚವಾಗಿ ಕಾಣಲಾಗುತ್ತಿತ್ತು. ಹೆಣ್ಣು ಮಕ್ಕಳು ಹುಟ್ಟಿದರೆ ಮರುಕ ಪಡುವ ಸಂಸ್ಕøತಿ ಇತ್ತು. ಆದರೆ ಇಂದು ಬದಲಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಾಪೋಕ್ಲು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬೊಜ್ಜಂಗಡ ಅವನಿಜ ಸೋಮಯ್ಯ ಮಾತನಾಡಿ, ಸಮಾಜದಲ್ಲಿ ಮಹಿಳೆಯರ ಮೇಲೆ ಅಹಿತಕರ ಘಟನೆಗಳು ನಡೆದಾಗ ಅದಕ್ಕೆ ಮಹಿಳೆಯರನ್ನೇ ಹೊಣೆಗಾರರನ್ನಾಗಿ ಮಾಡುವ ಕಾರ್ಯ ಇಂದಿಗೂ ಮುಂದುವರೆದು ಕೊಂಡು ಬಂದಿದೆ. ಇತಿಹಾಸವನ್ನು ಕೆದಕಿದಾಗ ಅಲ್ಲಿ ಹೆಣ್ಣಿಗೆ ಸ್ವಾತಂತ್ರ್ಯವಿದ್ದದನ್ನು ಕಾಣಬಹುದು. ಆದರೆ ನಂತರ ಕೆಲಕಾಲ ಮತ್ತೆ ಹೆಣ್ಣು ಶೋಷಣೆಗೆ ಒಳಗಾಗುತ್ತಲೇ ಬರುತ್ತಿದ್ದಾಳೆ ಎಂದು ವಿಷಾಧಿಸಿದರು.

ಪೊಮ್ಮಕ್ಕಡ ಸ್ಥಿತಿ ಅಂದ್‍ಇಂದ್ ಕುರಿತು ನಗರಸಭೆ ಮಾಜಿ ಸದಸ್ಯೆ ಅನಿತಾ ಪೂವಯ್ಯ ವಿಚಾರ ಮಂಡನೆ ಮಾಡಿ ಮಹಿಳೆ ತನ್ನ ಹಕ್ಕಿಗಾಗಿ ಹಿಂದಿನಿಂದಲೂ ಹೋರಾಡುತ್ತಾ ಬಂದವಳು, ಆಕೆ ಇಂದಿಗೂ ತನ್ನ ಹೋರಾಟವನ್ನು ಮುಂದುವರೆಸಿದ್ದಾಳೆ. ನಗರದ ಪತ್ರಿಕಾ ಭವನದಲ್ಲಿ ಪೊಮ್ಮಕ್ಕಡ ನಾಳ್ ಕಾರ್ಯಕ್ರಮ ನಡೆಯಿತು.

ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ರಾಣು ಅಪ್ಪಣ್ಣ ಅವರು, ದೇಶ ಹಾಗೂ ವಿದೇಶದಲ್ಲಿ ಹಿಂದೆ ಹೆಣ್ಣನ್ನು ತುಚ್ಚವಾಗಿ ಕಾಣಲಾಗುತ್ತಿತ್ತು. ಹೆಣ್ಣು ಮಕ್ಕಳು ಹುಟ್ಟಿದರೆ ಮರುಕ ಪಡುವ ಸಂಸ್ಕøತಿ ಇತ್ತು. ಆದರೆ ಇಂದು ಬದಲಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಾಪೋಕ್ಲು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬೊಜ್ಜಂಗಡ ಅವನಿಜ ಸೋಮಯ್ಯ ಮಾತನಾಡಿ, ಸಮಾಜದಲ್ಲಿ ಮಹಿಳೆಯರ ಮೇಲೆ ಅಹಿತಕರ ಘಟನೆಗಳು ನಡೆದಾಗ ಅದಕ್ಕೆ ಮಹಿಳೆಯರನ್ನೇ ಹೊಣೆಗಾರರನ್ನಾಗಿ ಮಾಡುವ ಕಾರ್ಯ ಇಂದಿಗೂ ಮುಂದುವರೆದು ಕೊಂಡು ಬಂದಿದೆ. ಇತಿಹಾಸವನ್ನು ಕೆದಕಿದಾಗ ಅಲ್ಲಿ ಹೆಣ್ಣಿಗೆ ಸ್ವಾತಂತ್ರ್ಯವಿದ್ದದನ್ನು ಕಾಣಬಹುದು. ಆದರೆ ನಂತರ ಕೆಲಕಾಲ ಮತ್ತೆ ಹೆಣ್ಣು ಶೋಷಣೆಗೆ ಒಳಗಾಗುತ್ತಲೇ ಬರುತ್ತಿದ್ದಾಳೆ ಎಂದು ವಿಷಾಧಿಸಿದರು.

ಪೊಮ್ಮಕ್ಕಡ ಸ್ಥಿತಿ ಅಂದ್‍ಇಂದ್ ಕುರಿತು ನಗರಸಭೆ ಮಾಜಿ ಸದಸ್ಯೆ ಅನಿತಾ ಪೂವಯ್ಯ ವಿಚಾರ ಮಂಡನೆ ಮಾಡಿ ಮಹಿಳೆ ತನ್ನ ಹಕ್ಕಿಗಾಗಿ ಹಿಂದಿನಿಂದಲೂ ಹೋರಾಡುತ್ತಾ ಬಂದವಳು, ಆಕೆ ಇಂದಿಗೂ ತನ್ನ ಹೋರಾಟವನ್ನು ಮುಂದುವರೆಸಿದ್ದಾಳೆ. ಸಮಾಜದಲ್ಲಿ ಮಹಿಳೆಗೆ ಸಮಾನತೆ ಎಂಬುದು ಬಾಯಿ ಮಾತಿಗೆ ಎಂಬ ಸ್ಥಿತಿ ಇಂದಿಗೂ ಇದೆ ಎಂದು ವಿಷಾಧ ವ್ಯಕ್ತಪಡಿಸಿದರು. ಪೊಮ್ಮಕ್ಕಡ ಪರಿಷತ್ ಉಪಾಧ್ಯಕ್ಷೆ ಮಳವಂಡ ಪೂವಿ ಮುತ್ತಪ್ಪ, ಕಾರ್ಯದರ್ಶಿ ಮಂಡೇಪಂಡ ಗೀತಾ ಮಂದಣ್ಣ ಹಾಗೂ ಖಜಾಂಜಿ ಮೂವೇರ ಧರಣಿ ಗಣಪತಿ ಪಾಲ್ಗೊಂಡಿದ್ದರು.

ಮಹಿಳಾ ಕಾಂಗ್ರೆಸ್

ಕೊಡಗು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯ ಅಬ್ರಾರ್ ನೇತೃತ್ವದಲ್ಲಿ ಮಹಿಳಾ ದಿನಾಚರಣೆಂ iÀುನ್ನು ಆಚರಿಸಲಾಯಿತು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕೆಪಿಸಿಸಿ ಸದಸ್ಯ ಟಿ.ಪಿ. ರಮೇಶ್ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ ಪಿ ಸುರೇಶ್, ಮತ್ತಿತರರು ಪಾಲ್ಗೊಂಡಿದ್ದರು.

ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದ ವೀಣಾ ಅಚ್ಚಯ್ಯ ಮಹಿಳೆಯರು ಪಕ್ಷದ ಕಾರ್ಯಕ್ರಮ ಗಳಲ್ಲಿ ಹೆಚ್ಚು ಭಾಗವಹಿಸಿ ಪಕ್ಷದಲ್ಲಿ ಒಳ್ಳೆಯ ಕೆಲಸಗಳನ್ನು ನಿರ್ವಹಿಸು ವಂತೆ ಕರೆ ನೀಡಿದರು ಸಭೆಯನ್ನು ಸುರಯ್ಯ ಅಬ್ರಾರ್‍ರವರು ಮಹಿಳೆಯರು ಸ್ವಾವಲಂಬಿಗಳಾಗಿ ಬದುಕುವಂತೆ ಮತ್ತು ಪಕ್ಷದಲ್ಲಿ ಹೆಚ್ಚಿನ ಅಸಕ್ತಿಯಿಂದ ಕೆಲಸ ಮಾಡುವಂತೆ ಸಲಹೆಯಿತ್ತರು.

ಮಹಿಳೆಯರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸ ಲಾಗಿತ್ತು. ಪ್ರತಿಭಾವಂತ ಕ್ರೀಡಾಪಟು ವಸಂತಿ ಬಿ. ಅವರನ್ನು ಸನ್ಮಾನಿಸ ಲಾಯಿತು. ಸಮಾರಂಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸಿನ ಪದಾಧಿಕಾರಿ ಗಳಾದ ದೇವಜಾನು, ಮಿನಾಜ್ ಪ್ರವೀಣ್, ಗಾಯತ್ರಿ ನರಸಿಂಹ, ಪ್ರದಾನ ಕಾರ್ಯದರ್ಶಿಗಳು, ದೇವಯಾನಿ, ಬ್ಲಾಕ್ ಅಧ್ಯಕ್ಷರುಗಳಾದ ಪೊನ್ನಕ್ಕಿ, ಫಿಲೋಮಿನ, ಮೀನಾಕ್ಷಿ, ಶೀಲಾ ಡಿಸೋಜ, ಸಾಮಾಜಿಕ ಜಾಲತಾಣದ ಕೈರುನ್ನಿಸಾ ಮತ್ತು ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಫ್ಯಾನ್ಸಿ ಪಾರ್ವತಿ, ಮುಮ್ತಾಜ್ ಬೇಗಂ ಮತ್ತಿತರರಿದ್ದರು.