ಮಡಿಕೇರಿ, ಮಾ. 8: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ 40 ದಿನಗಳ ರಾಜ್ಯ ಮಟ್ಟದ ಅರೆಭಾಷೆ ರಂಗ ಶಿಬಿರದ ಸಮಾರೋಪ ಸಮಾರಂಭ ಹಾಗೂ ಅರೆಭಾಷೆ ನಾಟಕ ರಂಗಪಯಣ ‘ಸಾಹೇಬ್ರು ಬಂದವೇ!’ ಅರೆಭಾಷೆ ನಾಟಕ ಉದ್ಘಾಟನಾ ಕಾರ್ಯಕ್ರಮವು ತಾ. 14 ರಂದು ಸಂಜೆ 6 ಗಂಟೆಗೆ ಸುಳ್ಯ ತಾಲೂಕಿನ ಹಳೆಗೇಟು ರಂಗಮನೆ ಸಾಂಸ್ಕøತಿಕ ಕಲಾಕೇಂದ್ರದಲ್ಲಿ ನಡೆಯಲಿದೆ.

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಅಂಗಾರ, ಕನ್ನಡ ಮತ್ತು ಸಂಸ್ಕøತಿ, ಪ್ರವಾಸೋದ್ಯಮ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವರಾದ ಸಿ.ಟಿ. ರವಿ, ಸುಳ್ಯ ಗೌಡರ ಯುವ ಸೇವಾ ಸಂಘದ ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ, ರಂಗಮನೆ ಸಾಂಸ್ಕøತಿಕ ಕಲಾಕೇಂದ್ರದ ಅಧ್ಯಕ್ಷರು ಹಾಗೂ ಶಿಬಿರದ ನಿರ್ದೇಶಕ ಜೀವನ್ ರಾಂ, ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ.