ಕೂಡಿಗೆ, ಮಾ. 7: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಎಲ್ಲಾ ಗ್ರಾಮಗಳ ವಾಸದ ಮನೆಮಾಲೀಕರು, ನೀರಿನ ಕಂದಾಯದಾರರು ಸರಿಯಾದ ಸಮಯದಲ್ಲಿ ಕಂದಾಯವನ್ನು ಪಾವತಿಸುವ ಮೂಲಕ ಗ್ರಾ.ಪಂ ವ್ಯಾಪ್ತಿಯ ಕಾಮಗಾರಿಗಳನ್ನು ಕೈಗೊಳ್ಳಲು ಸಹಕಾರ ನಿಡುವಂತೆ ಕೂಡುಮಂಗಳೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಆಯಿಷಾ ಮನವಿ ಮಾಡಿಕೊಂಡಿದ್ದಾರೆ.
ಕೂಡುಮಂಗಳೂರು ಗ್ರಾ.ಪಂ ಆವರಣದಲ್ಲಿ ನಡೆದ ಕಂದಾಯ ಮಾಸಾಚರಣೆ ಹಾಗೂ ಕರ ವಸೂಲಾತಿಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೂಡುಮಂಗಳೂರು ಗ್ರಾ.ಪಂ ಗ್ರಾಮಸ್ಥರಿಗೆ ತಮ್ಮ ತಮ್ಮ ಕರ ಪಾವತಿಸಲು ಈಗಾಗಲೇ ಅನೇಕ ಬಾರಿ ಮನವಿ ಮಾಡಲಾಗಿದೆ. ಈಗಾಗಲೇ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಆದೇಶದಂತೆ ಪಂಚಾಯಿತಿ ರಾಜ್ಯ ಅಧಿನಿಯಮದಂತೆ ಗ್ರಾ.ಪಂ ಗೆ ಸಾರ್ವಜನಿಕರು ತಮ್ಮ ಕಂದಾಯವನ್ನು ಕಟ್ಟಲು ಸೂಚನೆ ನೀಡಲಾಗಿದೆ. ಸಂಬಂಧಪಟ್ಟವರು ತಮ್ಮ ಕಂದಾಯವನ್ನು ಸಮಯಕ್ಕೆ ಸರಿಯಾಗಿ ಕಟ್ಟದಿದ್ದಲ್ಲಿ ಗ್ರಾ.ಪಂ ನಿಂದ ದೊರಕುವ ಸೌಲಭ್ಯಗಳನ್ನು ತಡೆ ಹಿಡಿಯಲಾಗುವುದು ಎಂದರು.
ಈ ಸಂದರ್ಭ ಗ್ರಾಮಸ್ಥರು ಮತ್ತು ಕೂಡುಮಂಗಳೂರು ಗ್ರಾ.ಪಂ ಸಿಬ್ಬಂದಿ ಇದ್ದರು.