ಮಡಿಕೇರಿ, ಮಾ. 6: ನಗರದ ವಿಜಯ ವಿನಾಯಕ ಬಡಾವಣೆ ಬಳಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮಿನಿ ವಿಧಾನಸೌಧದ ದ್ವಿತೀಯ ಹಂತದ ಕಾಮಗಾರಿಗೆ ಸರಕಾರದಿಂದ ರೂ. 10.10 ಕೋಟಿ ಅಂದಾಜು ಪಟ್ಟಿ ಸ್ವೀಕೃತವಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.ಸದನದಲ್ಲಿ ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ವಿಷಯ ಪ್ರಸ್ತಾಪಿಸಿ; ಕಾಮಗಾರಿ ವಿಳಂಬ ಕುರಿತು ಕೇಳಿದಾಗ ಲಿಖಿತ ಉತ್ತರ ನೀಡಿದ ಸಚಿವರು; ಪ್ರಥಮ ಹಂತದಲ್ಲಿ ಮಳೆ ಹಾಗೂ ನಿವೇಶನದಲ್ಲಿ ತೇವಾಂಶದಿಂದ ಕೆಲಸ ವಿಳಂಬಗೊಂಡಿದ್ದಾಗಿ ನೆನಪಿಸಿದ್ದಾರೆ. ಅಲ್ಲದೆ ಈಗಾಗಲೇ ರೂ. 5 ಕೋಟಿಯ ಕಾಮಗಾರಿ ಪೂರ್ಣಗೊಂಡಿದ್ದು; ದ್ವಿತೀಯ ಹಂತದ ಪ್ರಸ್ತಾವನೆ ಬಗ್ಗೆ ಅಗತ್ಯ ಕ್ರಮ ವಹಿಸಿ ಮತ್ತೆ ರೂ. 5 ಕೋಟಿಯಲ್ಲಿ ಸೀಮಿತಗೊಂಡು ಕಾಮಗಾರಿಗೆ ಪರಿಷ್ಕøತ ಪ್ರಸ್ತಾವನೆಯೊಂದಿಗೆ ನಕ್ಷೆ ಸಲ್ಲಿಸಲು ಕೊಡಗು ಜಿಲ್ಲಾಧಿಕಾರಿ ಅವರಿಗೆ ತಿಳಿಸಲಾಗಿದೆ ಎಂದು ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ.