ಮಡಿಕೇರಿ, ಮಾ. 6: ಇಲ್ಲಿನ ತಾಂತ್ರಿಕ ಸರಕಾರಿ ಕಾಲೇಜು ಬಳಿಯ ವಸತಿಗೃಹ ವೊಂದರ ಶೌಚಾಲಯ ಹಾಗೂ ಇತರ ಕೊಳಕು ತ್ಯಾಜ್ಯವನ್ನು ಕಾವೇರಿ ಹೊಳೆಯಲ್ಲಿ ಹರಿಯಬಿಟ್ಟಿರುವ ಮೇರೆಗೆ; ಗುಡ್ಡೆಹೊಸೂರು ಗ್ರಾ.ಪಂ.ನಿಂದ ಇಂದು ಸಂಬಂಧಿಸಿದ ವಸತಿಗೃಹಕ್ಕೆ ಬೀಗ ಜಡಿಯಲಾಗಿದೆ.ತಾಂತ್ರಿಕ ಕಾಲೇಜು ಎದುರಿನ ‘ನ್ಯೂ ಪೆಪ್ಪರ್ ಲ್ಯಾಂಡ್’ ವಸತಿಗೃಹದ ತ್ಯಾಜ್ಯವನ್ನು ನದಿಗೆ ಬಿಡುತ್ತಿರುವ ಬಗ್ಗೆ ನಿರಂತರ ದೂರುಗಳ ಮೇರೆಗೆ ಹಲವು ಬಾರಿ ನೋಟೀಸ್ (ಮೊದಲ ಪುಟದಿಂದ) ನೀಡಿದ್ದರೂ ಗಮನ ಹರಿಸದ್ದರಿಂದ ಕ್ರಮ ಜರುಗಿಸಲಾಗಿದೆ ಎಂದು ಗುಡ್ಡೆಹೊಸೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ಯಾಂ ಖಚಿತಪಡಿಸಿದ್ದಾರೆ.ಅಲ್ಲದೆ ಇಂದು ವಸತಿಗೃಹದ 12 ಕೊಠಡಿಗಳಲ್ಲಿ ಪ್ರವಾಸಿಗರು ತಂಗಿದ್ದ ಮೇರೆಗೆ ಒಂದು ದಿನ ಕಾಲಾವಕಾಶದೊಂದಿಗೆ; ತಾ. 7 ರಿಂದ ಮತ್ತೆ ಬೀಗ ಹಾಕುವದರೊಂದಿಗೆ ಕಾನೂನು ಕ್ರಮ ಕೈಗೊಳ್ಳುವದಾಗಿ ತಿಳಿಸಿದ್ದಾರೆ. ಈ ವೇಳೆ ಗ್ರಾ.ಪಂ. ಸದಸ್ಯರಾದ ಪ್ರವೀಣ್, ಪುಷ್ಪನಾಗೇಶ್ ಹಾಜರಿದ್ದರು.
-ಚಿತ್ರ, ವರದಿ : ಟಿ.ಜಿ. ಸತೀಶ್