ಮಡಿಕೇರಿ, ಮಾ. 6: ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಬಹುಮಾನ ನೀಡಿಕೆಗೆ ಸಂಬಂಧಿಸಿದಂತೆ 2019ನೇ ಸಾಲಿನಲ್ಲಿ ಜನವರಿ 1, 2019 ರಿಂದ ಡಿಸೆಂಬರ್ 31 ರವರೆಗಿನ ಅವಧಿಯಲ್ಲಿ ಪ್ರಥಮಾವೃತ್ತಿಯಲ್ಲಿ ಪ್ರಕಟವಾಗಿರುವ ಅನುವಾದಿತ ಪುಸ್ತಕಗಳನ್ನು ಹಾಗೂ ಅನುವಾದ ಅಧ್ಯಯನವನ್ನು ಕುರಿತ ಪುಸ್ತಕಗಳನ್ನು 2019ನೇ ಸಾಲಿನ ಪುಸ್ತಕ ಬಹುಮಾನಕ್ಕಾಗಿ ಅರ್ಹ ಅನುವಾದಕರು ಹಾಗೂ ಪ್ರಕಾಶಕರಿಂದ ಆಹ್ವಾನಿಸಲಾಗಿದ್ದು, ಈ ಪುಸ್ತಕಗಳ ಸ್ವೀಕೃತಿಯನ್ನು ತಾ. 15 ವರೆಗೆ ವಿಸ್ತರಿಸಲಾಗಿದೆ. ಕನ್ನಡದಿಂದ ಇತರ ಯಾವುದೇ ಭಾಷೆಯಾಗಲಿ ಇಲ್ಲವೇ ಇತರ ಯಾವುದೇ ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡಿರುವ ಕೃತಿಗಳನ್ನು ಬಹುಮಾನಕ್ಕಾಗಿ ಪರಿಗಣಿಸಲಾಗುತ್ತದೆ.
2019ರ ಸಾಲಿನ ಅನುವಾದ ಸಾಹಿತ್ಯವನ್ನು ಕುರಿತ ‘ಅಧ್ಯಯನ ಪುಸ್ತಕ’ಗಳನ್ನು ಕೂಡ ಬಹುಮಾನಕ್ಕಾಗಿ ಪರಿಗಣಿಸಲಾಗುತ್ತದೆ. ಪ್ರಥಮಾವೃತ್ತಿಯಲ್ಲಿ 2019ನೇ ಸಾಲಿನಲ್ಲಿ ಪ್ರಕಟವಾಗಿರುವ ಅನುದಾನಿತ ಪುಸ್ತಕಗಳ ಬಗ್ಗೆ ಮಾಹಿತಿ ಇರುವವರು ಸಹ ಪುಸ್ತಕಗಳನ್ನು ಕಚೇರಿಗೆ ಕಳುಹಿಸಿಕೊಡಬಹುದು. ಬಹುಮಾನಿತ ಕೃತಿಗಳಿಗೆ ಪ್ರಾಧಿಕಾರವು ನಿಗದಿಪಡಿಸಿದ ಮೊತ್ತವನ್ನು ಬಹುಮಾನವಾಗಿ ನೀಡಲಾಗುತ್ತದೆ.
ಪುಸ್ತಕ ಬಹುಮಾನಕ್ಕೆ ಪುಸ್ತಕಗಳನ್ನು ಕಳುಹಿಸುವವರು ಅನುವಾದಿತ ಪ್ರಕಟಣೆಗಳಲ್ಲಿ ಪ್ರತಿ ಪುಸ್ತಕದ 4 ಪ್ರತಿಗಳನ್ನು ರಿಜಿಸ್ಟ್ರಾರ್, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಜ್ಞಾನಭಾರತಿ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು-560056, ಕಚೇರಿಗೆ ಖುದ್ದಾಗಿ ಅಥವಾ ಅಂಚೆ ಮತ್ತು ಕೊರಿಯರ್ ಮೂಲಕ ತಾ. 15 ರೊಳಗಾಗಿ ತಲುಪಿಸಬೇಕೆಂದು ಕೋರಲಾಗಿದೆ.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 23183311/12 ಅಥವಾ ಈ ಮೇಲ್ ವಿಳಾಸ ತಿತಿತಿ.ಞuvemಠಿubhಚಿshಚಿ bhಚಿಡಿಚಿಣhi.oಡಿg ಅನ್ನು ಸಂಪರ್ಕಿಸಬಹುದಾಗಿದೆ ಎಂದು ರಿಜಿಸ್ಟ್ರಾರ್ ತಿಳಿಸಿದ್ದಾರೆ.