ಸೋಮವಾರಪೇಟೆ, ಮಾ. 6: ಯಡೂರಿನ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾ. 7 ರಂದು (ಇಂದು) ಆಂತರಿಕ ಗುಣಮಟ್ಟ ಖಾತ್ರಿ ಕೋಶ ಮತ್ತು ವಾಣಿಜ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ಜಿಲ್ಲಾಮಟ್ಟದ ವಿಚಾರಗೋಷ್ಠಿ ನಡೆಯಲಿದೆ ಎಂದು ಪ್ರಾಂಶುಪಾಲ ಪ್ರೊ. ಶ್ರೀಧರ್ ತಿಳಿಸಿದ್ದಾರೆ.ಕಾಲೇಜಿನ ನೂತನ ಸಭಾಂಗಣದಲ್ಲಿ ಬೆಳಿಗ್ಗೆ 10.15ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಲೆಕ್ಕಪರಿಶೋಧಕ ಎ.ಎಸ್. ಅಂಶುಮಾನ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಬಿ.ಎಂ. ಪ್ರವೀಣ್‍ಕುಮಾರ್ ವಹಿಸಲಿದ್ದಾರೆ.

ಮೊದಲ ಅಧಿವೇಶನ 10.30 ರಿಂದ 11.45 ರವರೆಗೆ ನಡೆಯಲಿದ್ದು, ಅಧ್ಯಕ್ಷತೆಯನ್ನು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಹೆಚ್.ಎನ್. ರಾಜು ವಹಿಸಲಿದ್ದಾರೆ. ‘ಇಮ್ಯಾಕ್ಟ್ ಆಫ್ ಜಿಎಸ್‍ಟಿ ಆನ್ ಇಂಡಿಯನ್ ಎಕಾನಮಿ’ ವಿಷಯವನ್ನು ಲೆಕ್ಕಪರಿಶೋಧಕ ವಾಗೀಶ್ ಗಣಪತಿ ಹೆಗ್ಗಡೆ ಮಂಡಿಸಲಿದ್ದಾರೆ. ಎರಡನೇ ಅಧಿವೇಶನ ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ನಡೆಯಲಿದ್ದು, ‘ಚೇಂಜಿಂಗ್ ರೋಲ್ ಆಫ್ ಕಮರ್ಷಿಯಲ್ ಬ್ಯಾಂಕ್ಸ್ ಇನ್ ಮೋರ್ಡೆನ್ ಇಂಡಿಯ’ ವಿಷಯವನ್ನು ವಿಜಯ ಬ್ಯಾಂಕ್ ವ್ಯವಸ್ಥಾಪಕ ಅಶೋಕ್ ವಿಮನ್ ಮಂಡಿಸಲಿದ್ದಾರೆ.