ಗೋಣಿಕೊಪ್ಪ ವರದಿ, ಮಾ. 6: ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಅಕ್ಷರ ಫೌಂಡೇಶನ್ ಸಹಯೋಗದಲ್ಲಿ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಗಣಿತ ಸ್ಪರ್ಧೆ ನಡೆಯಿತು.

4ನೇ ತರಗತಿ ವಿಭಾಗದಲ್ಲಿ ವಿ.ಎಂ. ಶ್ರಾವಣಿ (ಪ್ರ), ಕೆ.ಪಿ. ಸಂಪ್ರೀತ (ದ್ವಿ), ಕೆ. ಕೀರ್ತನಾ (ತೃ), 5ನೇ ತರಗತಿ ವಿಭಾಗದಲ್ಲಿ ಕಿರಣ್ (ಪ್ರ), ಲಿತಿನ್ ವರ್ಗೀಸ್ (ದ್ವಿ), ಸುಹಾಸ್ (ತೃ), 6ನೇ ತರಗತಿ ವಿಭಾಗದಲ್ಲಿ ಎಂ.ಎಸ್. ಸಪ್ನ (ಪ್ರ), ಹೆಚ್.ವಿ. ಶಿವಕುಮಾರ್ (ದ್ವಿ), ಜೆ.ಜೆ. ಅಪೂರ್ವ (ತೃ) ಸ್ಥಾನ ಪಡೆದುಕೊಂಡರು.

ಅಕ್ಷರ ಫೌಂಡೇಶನ್ ನೋಡೆಲ್ ಅಧಿಕಾರಿ ಕುಮಾರಸ್ವಾಮಿ, ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ, ವೀರಾಜಪೇಟೆ ಸಮೂಹ ಸಂಪನ್ಮೂಲ ಸಮನ್ವಯಾಧಿಕಾರಿ ವನಾಜಾಕ್ಷಿ, ಮುಖ್ಯ ಶಿಕ್ಷಕಿ ಕೆ.ಆರ್. ಶಶಿಕಲಾ, ಪಿಡಿಒ ಶ್ರೀನಿವಾಸ್ ಬಹುಮಾನ ವಿತರಿಸಿದರು.