ಮಡಿಕೇರಿ, ಮಾ. 3: ಸಾರ್ವಜನಿಕರಿಗೆ ದುಪ್ಪಟ್ಟು ಹಣ ಗಳಿಸುವ ಆಸೆ ತೋರಿಸಿ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸುವ ಜಾಲವೊಂದನ್ನು ಜಿಲ್ಲಾ ಅಪರಾಧ ಪತ್ತೆ ದಳ ಬೇಧಿಸಿದ್ದು; ಮೂವರು ಆರೋಪಿಗಳನ್ನು ಬಂಧಿಸಿದೆ. ಉಳಿದ ನಾಲ್ವರು ಆರೋಪಿಗಳ ಸೆರೆಗೆ ಶೋಧ ಕಾರ್ಯ ಮುಂದುವರೆಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ತಿಳಿಸಿದ್ದಾರೆ.ಇಂದು ತಮ್ಮ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಎಸ್‍ಪಿ ಈ ಕುರಿತು ಮಾಹಿತಿ ನೀಡಿದರು. ಕುಶಾಲನಗರದ ಒಟ್ಟು ಏಳು ಮಂದಿ ಆರೋಪಿಗಳು ಬೆಂಗಳೂರು ಮೂಲದ ವೆಬ್‍ಸೈಟ್ ಡೆವಲಪರ್ಸ್‍ಗೆ ಒಂದೂವರೆ ಲಕ್ಷ ಹಣ ಪಾವತಿಸಿ ಅಚಿಠಿiಣಚಿಟ ಡಿeಟಚಿಣioಟಿs.iಟಿ ಎಂಬ ನಕಲಿ ವೆಬ್‍ಸೈಟ್ ರೂಪಿಸಿಕೊಂಡು ಈ ವೆಬ್‍ಸೈಟ್‍ನಲ್ಲಿ ಹಣ ಹೂಡಿಕೆ ಮಾಡಿದರೆ ಸುಲಭವಾಗಿ ದುಪ್ಪಟ್ಟು ಹಣ ಸಂಪಾದಿಸಬಹುದೆಂದು ಸಾರ್ವಜನಿಕರಿಗೆ ಆಮಿಷವೊಡ್ಡಿ ಸುಮಾರು 3000ಕ್ಕೂ ಅಧಿಕ ಮಂದಿಯಿಂದ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದಾರೆ. ಕುಶಾಲನಗರ ಹಾಗೂ ರಾಜ್ಯದಾದ್ಯಂತ ಹಲವಾರು ಮಂದಿ ಹಣ ಹೂಡಿಕೆ ಮಾಡಿದ್ದು; ಈ ಬಗ್ಗೆ ದೊರೆತ ದೂರಿನನ್ವಯ ತನಿಖೆ ನಡೆಸಿ ಕುಶಾಲನಗರ ತ್ಯಾಗರಾಜ ರಸ್ತೆಯ ಮೂರನೇ ಬ್ಲಾಕ್‍ನ ಎ.ಜಾನ್, ಶಿವರಾಮಕಾರಂತ ಬಡಾವಣೆಯ ನಾಲ್ಕನೇ ಬ್ಲಾಕ್‍ನ ಶಶಿಕಾಂತ್ ಅಲಿಯಾಸ್ ಶಮ್ಮಿ, ಬಸವೇಶ್ವರ ಬಡಾವಣೆಯ ಒಂದನೇ ಬ್ಲಾಕ್‍ನ (ಮೊದಲ ಪುಟದಿಂದ) ಆಂಟೋನಿ ಡಿ. ಕುನ್ನಾ ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಜಾನ್ ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿದ್ದರೆ; ಶಶಿಕಾಂತ್ ಬಿಎಸ್‍ಎಂ ಮೋಟಾರ್ಸ್‍ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್, ಆಂಟೋನಿ ಡಿ. ಕುನ್ನಾ ದಿವಾನ್ ಹೌಸಿಂಗ್ ಫೈನಾನ್ಸ್‍ನಲ್ಲಿ ಕಾರ್ಪೊರೇಷನ್‍ನಲ್ಲಿ ವ್ಯವಸ್ಥಾಪಕ ನಾಗಿ ಕೆಲಸ ಮಾಡುತ್ತಿದ್ದ. ಬಂಧಿತರಿಂದ ಮೊಬೈಲ್‍ಗಳು ಹಾಗೂ ಲ್ಯಾಪ್‍ಟಾಪ್‍ಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಸುಮನ್ ವಿವರಿಸಿದರು.

ಮೋಸ ಹೇಗೆ?ಅಚಿಠಿiಣಚಿಟ ಡಿeಟಚಿಣioಟಿs.iಟಿ ನ ವ್ಯವಹಾರದಲ್ಲಿ ಆರೋಪಿ ಶಶಿಕಾಂತ್ ಎಡ್ಮಿನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು; ಈ ವ್ಯವಹಾರದಲ್ಲಿ ಹಣ ಹೂಡಲು ಇಚ್ಚಿಸುವ ಸಾರ್ವಜನಿಕರು ಮೊದಲಿಗೆ ಶಶಿಕಾಂತ್‍ನನ್ನು ಸಂಪರ್ಕಿಸಿ ಯೂಸರ್ ಐಡಿ, ಪಾಸ್‍ವರ್ಡ್‍ನೊಂದಿಗೆ ಮೂರು ಇ-ಪಿನ್‍ಗಳನ್ನು ಖರೀದಿಸಬೇಕು. ಒಂದು ಇ-ಪಿನ್‍ಗೆ 1000 ರೂ. ನಂತೆ 3000ರೂ.ಗಳನ್ನು ಪಾವತಿಸಿ ಖರೀದಿಸಿದ ಬಳಿಕ ಆ ಹಣವು ಆರೋಪಿಗಳ ಖಾತೆಗೆ ಜಮಾವಣೆಯಾಗುತ್ತದೆ. ಹೀಗೆ ಅಚಿಠಿiಣಚಿಟ ಡಿeಟಚಿಣioಟಿs.iಟಿ ನಲ್ಲಿ ಹಣ ತೊಡಗಿಸಲಿಚ್ಚಿಸುವವರು ವೆಬ್‍ಸೈಟ್‍ಗೆ ಯೂಸರ್ ಐಡಿ, ಪಾಸ್‍ವರ್ಡ್ ಬಳಸಿ ಲಾಗಿನ್ ಆಗಿ ತಾವು ಖರೀದಿಸಿದ ಇ-ಪಿನ್‍ನ್ನು ಬಳಸಿ ಒಂದು ಇ-ಪಿನ್‍ಗೆ 3000 ರೂ.ಗಳಂತೆ ಹಣವನ್ನು ತೊಡಗಿಸುತ್ತಿದ್ದರು. ಪ್ರತಿ ದಿನ ಒಂದು ಯೂಸರ್ ಐಡಿಯಿಂದ ಮೂರು ಇ-ಪಿನ್‍ನ್ನು ಮಾತ್ರ ಬಳಸಬಹುದಾಗಿದ್ದು; ಹಣ ಹೂಡಿಕೆ ಮಾಡಲು ಲಾಗಿನ್ ಆದ ಕೂಡಲೇ ತಾವು ಹೂಡಿಕೆ ಮಾಡುತ್ತಿರುವ 3000 ರೂ. ಹಣ ಯಾರ ಖಾತೆಗೆ ಹೋಗಬೇಕು ಎಂಬದನ್ನು ಮಾನಿಟರ್‍ನಲ್ಲಿ ತೋರಿಸುತ್ತದೆ.

ಬಳಿಕ ಹೂಡಿಕೆದಾರರು ಹಣ ಪಡೆಯುವ ಸದಸ್ಯರ ಮೊಬೈಲ್‍ಗೆ ಕರೆ ಮಾಡಿ ತಾವು ಗೂಗಲ್ ಪೇ, ಫೋನ್‍ಪೇ ಅಥವಾ ನೆಟ್‍ಬ್ಯಾಂಕಿಂಗ್ ಮೂಲಕ ಹಣ ಹಾಕುತ್ತಿರುವದಾಗಿ ತಿಳಿಸಿ ಹಣ ಸಂದಾಯವಾದ ರಸೀದಿಯನ್ನು ಅಪ್‍ಲೋಡ್ ಮಾಡಬೇಕು. ಈ ವ್ಯವಹಾರದಲ್ಲಿ ಪ್ರಪ್ರಥಮ ಬಾರಿ ಹೂಡಿಕೆ ಮಾಡಿದ ವ್ಯಕ್ತಿಗೆ 7 ದಿನಗಳ ನಂತರ ಹಣ ದ್ವಿಗುಣಗೊಂಡು ತಲಾ ಒಂದು ಇ-ಪಿನ್‍ಗೆ 6000 ರೂ.ನಂತೆ ಆತನ ಬ್ಯಾಂಕ್ ಖಾತೆಗೆ ಸಂದಾಯವಾಗುತ್ತದೆ. ಈ ರೀತಿ ಮೊದ ಮೊದಲು ಲಾಭ ಪಡೆದಂತಹ ಸಾರ್ವಜನಿಕರು ಹಣದ ದುರಾಸೆಯಿಂದ ಬೇರೆ ಬೇರೆ ಹೆಸರುಗಳಲ್ಲಿ ಇ-ಪಿನ್ ಖರೀದಿಸಿ ಲಾಗಿನ್ ಆಗಿ ಹಣ ಹೂಡಿಕೆ ಮಾಡಿದ್ದು; ಸುಮಾರು 15 ಕೋಟಿಯಷ್ಟು ಹಣದ ವ್ಯವಹಾರ ನಡೆದಿದೆ. ಕಳೆದ ಅಕ್ಟೋಬರ್‍ನಲ್ಲಿ ಆರಂಭವಾದ ಈ ವ್ಯವಹಾರದಲ್ಲಿ ನಂತರದ ದಿನಗಳಲ್ಲಿ ಹೂಡಿಕೆದಾರರಿಗೆ ಹಣ ನೀಡದೆ ಚಳ್ಳೆ ಹಣ್ಣು ತಿನ್ನಿಸಲಾರಂಭಿಸಿದ್ದು; ಈ ಬಗ್ಗೆ ಪೊಲೀಸ್ ತನಿಖೆ ನಡೆದ ಹಿನ್ನೆಲೆಯಲ್ಲಿ ಭಾರೀ ಅಕ್ರಮವೊಂದು ಬಯಲಾಗಿದೆ ಎಂದು ಡಾ. ಸುಮನ್ ವಿವರಿಸಿದರು.

ಇಂತಹ ವ್ಯವಹಾರಗಳನ್ನು ಮಾಡುವ ಅನೇಕ ವೆಬ್‍ಸೈಟ್‍ಗಳು ಸಹಾಯ ಹಸ್ತ ನೀಡುವ ಸೋಗಿನಲ್ಲಿ ಅಂತರ್ಜಾಲದಲ್ಲಿ ಚಾಲನೆಯಲ್ಲಿವೆ. ಉದಾಹರಣೆಗೆ heಟಠಿiಟಿgಠಿಟಚಿಟಿeಣ.iಟಿ, ಞiಟಿgheಟಠಿiಟಿg.iಟಿ, ರಿusಣmoಟಿeಥಿ.iಟಿ, ಛಿಡಿoತಿಜಜಿuಟಿಜiಟಿg.iಟಿ, ಛಿಚಿಡಿiಟಿgಛಿಟub.iಟಿ, iಟಿಜಿiಟಿiಣeಛಿಟub.iಟಿ ಎಂದೂ ಮಾಹಿತಿ ನೀಡಿದ ಎಸ್‍ಪಿ, ಸಾರ್ವಜನಿಕರು ದುಪ್ಪಟ್ಟು ಹಣ ಆಮಿಷವೊಡ್ಡುವ ವ್ಯಕ್ತಿಗಳು ತಮ್ಮನ್ನು ಸಂಪರ್ಕಿಸಿದಾಗ, ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವ ಮೂಲಕ ವಂಚನೆಯಿಂದ ಪಾರಾಗುವಂತೆ ಮನವಿ ಮಾಡಿದರು.