ವೀರಾಜಪೇಟೆ, ಮಾ. 3: ಸರಕಾರಿ ಪ್ರಥಮ ದರ್ಜೆ ಕಾಲೇಜು ವೀರಾಜಪೇಟೆ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ ರಚನೆ ಮಾಡಲಾಗಿರುವ ವಿದ್ಯಾರ್ಥಿ ಭ್ರಾತೃತ್ವ ವೇದಿಕೆ ಉದ್ಘಾಟನೆ ತಾ. 12 ಮತ್ತು 13 ರಂದು ನಡೆಯಲಿರುವ “ಸುಗ್ಗಿ ಸಂಭ್ರಮ” ಎಂಬ ವಿಶೇಷ ಕಾರ್ಯಕ್ರಮದ ಕರಪತ್ರ ಬಿಡುಗಡೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾಲೇಜಿನ ಪ್ರಾಂಶುಪಾಲ ಡಾ. ಡಿ.ಕೆ. ಬೋಪಯ್ಯ ಕಾರ್ಯಕ್ರಮ ಉದ್ಘಾಟಿಸಿ ಕರಪತ್ರ ಹಾಗೂ ಕಿರುಪುಸ್ತಕವನ್ನು ಬಿಡುಗಡೆ ಮಾಡಿದರು. ಎಸ್‍ಎಫ್‍ಸಿ ಅಧ್ಯಕ್ಷ ಪೆÇ್ರ. ರುದ್ರ, ಕಾರ್ಯದರ್ಶಿ ಡಾ.ಡಿ.ಕೆ. ಉಷಾ, ಪೆÇ್ರ. ನಾಗರಾಜಮೂರ್ತಿ ಪಿ.ಎನ್., ಪೆÇ್ರ. ರಘುರಾಜ್ ಆರ್. ಹಾಗೂ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಜೆರಿಟಾ ಮೆನೆಜಸ್ ಉಪಸ್ಥಿತರಿದ್ದರು.