ಸೋಮವಾರಪೇಟೆ, ಮಾ. 3: ಇಲ್ಲಿನ ಪ.ಪಂ.ಗೆ ಒಳಪಟ್ಟ ವಿವಿಧ ಮಳಿಗೆ-ಮಾರುಕಟ್ಟೆಯ ಹರಾಜು ಪ್ರಕ್ರಿಯೆ ಪ.ಪಂ. ಸಭಾಂಗಣದಲ್ಲಿ ನಡೆದು, ಕಳೆದ ಸಾಲಿಗಿಂತ ರೂ. 29,902 ಲಾಭ ಬಂದಿದೆ.

ಸಂತೆ ಸುಂಕ ಎತ್ತಾವಳಿ ಹಕ್ಕು ರೂ. 9,93,000 ಹರಾಜಾಗಿದ್ದು, ಹಿಂದಿನ ಸಾಲಿಗಿಂತ 10,000 ಲಾಭ ಪಡೆಯಿತು. ಕುರಿ ಮಾಂಸ ಮಳಿಗೆಗಳು ರೂ. 1,97,000 ಹರಾಜಾಗಿದ್ದು, ಕಳೆದ ಸಾಲಿಗಿಂತ ರೂ. 5 ಸಾವಿರ ಹೆಚ್ಚಿನ ಮೊತ್ತ ಲಭಿಸಿತು.

ಕೋಳಿ ಮಾಂಸದ ಮಳಿಗೆಗಳು ರೂ. 6,73,000ಕ್ಕೆ ಹರಾಜಾಗುವ ಮೂಲಕ ಕಳೆದ ಸಾಲಿಗಿಂತ ರೂ.4,400 ಹೆಚ್ಚಿನ ಲಾಭ ಪಡೆಯಿತು. ಹಸಿಮೀನು ಮಾರುಕಟ್ಟೆ ರೂ. 4,00,000 ಹರಾಜಾಗಿ ಹಿಂದಿನ ಸಾಲಿಗಿಂತ ರೂ. 4,002 ಹೆಚ್ಚಿನ ಹಣ ದೊರೆಯಿತು. ಖಾಸಗಿ ಬಸ್ ನಿಲ್ದಾಣದ ಸುಂಕ ಎತ್ತಾವಳಿ ರೂ.38,500ಕ್ಕೆ ಹರಾಜಾಗಿ ಹಿಂದಿನ ಸಾಲಿಗಿಂತ ರೂ. 6500 ಲಾಭವಾಯಿತು. ಉಳಿದಂತೆ ಹಂದಿ ಮಾಂಸದ ಮಾರುಕಟ್ಟೆಗೆ ಸೂಕ್ತ ದರ ದೊರಕದ ಹಿನ್ನೆಲೆಯಲ್ಲಿ ಹರಾಜು ಪ್ರಕ್ರಿಯೆಯನ್ನು ಮುಂದೂಡಲಾಯಿತು.

ಒಟ್ಟಾರೆ ರೂ. 22,38,500 ಮೊತ್ತಕ್ಕೆ ಮಳಿಗೆಗಳು ಹರಾಜಾಗುವ ಮೂಲಕ ಪ್ರಸಕ್ತ ವರ್ಷ ಪಂಚಾಯಿತಿಯು ರೂ. 29,902 ಹೆಚ್ಚಿನ ಲಾಭ ಪಡೆಯಿತು.

ಈ ಸಂದರ್ಭ ಪ.ಪಂ. ಆಡಳಿತಾಧಿಕಾರಿ ಗೋವಿಂದರಾಜು, ಪಂ. ಮುಖ್ಯಾಧಿಕಾರಿ ರಮೇಶ್, ಆರೋಗ್ಯ ನಿರೀಕ್ಷಕ ಉದಯ ಕುಮಾರ್, ಸಿಬ್ಬಂದಿ ರಫೀಕ್ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.