ಜನಸ್ನೇಹಿ ವೇದಿಕೆ
ಮಡಿಕೇರಿ, ಮಾ.3: ಸಾರ್ವಜನಿಕರ ಕುಂದುಕೊರತೆ ಅಹವಾಲುಗಳನ್ನು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ದೊರಕಿಸಿ ಕೊಡಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜನಸ್ನೇಹಿ ಹೆಸರಿನ ವೇದಿಕೆ ಸ್ಥಾಪಿಸಿದೆ.
ಸಾರ್ವಜನಿಕರ ಕುಂದು ಕೊರತೆ ಹಾಗೂ ಸಮಸ್ಯೆಗಳನ್ನು ಟ್ವಿಟರ್ @ಞಚಿಡಿಟಿಚಿಣಚಿಞಚಿ_ಆiಠಿಡಿ ಹಾಗೂ ಮೊಬೈಲ್ ದೂರವಾಣಿ ಸಂಖ್ಯೆಗೆ 9980299802 ವಾಟ್ಸ್‍ಆಪ್ ಕಳುಹಿಸಿದರೆ ಅದನ್ನು ಜನಸ್ನೇಹಿ ವೇದಿಕೆ ಸಂಬಂಧಪಟ್ಟ ಇಲಾಖೆ ಗಮನಕ್ಕೆ ತರಲಿದೆ. ವೇದಿಕೆಯಡಿ ಸೇವೆ ನೀಡಲು ಇಲಾಖೆಯು ಈಗಾಗಲೇ ಪರಿಣಿತರ ತಂಡವನ್ನು ರಚಿಸಿದ್ದು, ಸಾರ್ವಜನಿಕ ದೂರುಗಳನ್ನು ಸ್ವೀಕರಿಸಿ, ಆ ದೂರುಗಳನ್ನು ಸಂಬಂಧಿಸಿದ ಇಲಾಖೆಗೆ ಕಳುಹಿಸಿ ಪರಿಹಾರ ದೊರಕಿಸಿಕೊಡಲಿದೆ. ಸರ್ಕಾರ ಮತ್ತು ಜನರ ನಡುವೆ ಸಂಪರ್ಕ ಸೇತುವೆಯಾಗಿ ವಾರ್ತಾ ಇಲಾಖೆ ಕೆಲಸ ಮಾಡಲಿದೆ.