ಮಡಿಕೇರಿ, ಮಾ.3: ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನಲ್ಲಿ ಗುಹ್ಯ ಮತ್ತು ಕರಡಿಗೋಡು ಗ್ರಾಮದ ನದಿ ತಟದಲ್ಲಿರುವ ಅನಧಿಕೃತ ಮನೆಗಳನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಲು ಜಿಲ್ಲಾಡಳಿತವು ಜಾಗವನ್ನು ಗುರುತಿಸಿ, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಿಂದ ವ್ಯವಸ್ಥಿತವಾಗಿ ವಿನ್ಯಾಸ ನಕ್ಷೆಯನ್ನು ರೂಪಿಸಿ, 30x40 ಅಳತೆಯ ನಿವೇಶನಗಳನ್ನಾಗಿ ವಿಂಗಡಿಸಿ, ಈ ನಿವೇಶನಗಳನ್ನು ಉಪ ವಿಭಾಗಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ 2020ರ ತಾ. 26 ರಂದು ಹಂಚಲು ಸಂಬಂಧಪಟ್ಟ ಸಂತ್ರಸ್ತರಿಗೆ ತಿಳುವಳಿಕೆ ನೀಡಿ ಕ್ರಮವಹಿಸಲಾಗಿತ್ತು. ಆದ್ದರಿಂದ ಈ ದಿನಾಂಕದಂದು ಸಂತ್ರಸ್ತರು ಹಾಜರಾಗದೇ ಇದ್ದುದರಿಂದ ಈ ನಿವೇಶನಗಳನ್ನು ಹಂಚಲು ಸಾಧ್ಯವಾಗಿಲ್ಲ.

2020ರ ತಾ.9 ರಂದು ಬೆಳಗ್ಗೆ 10 ಗಂಟೆಗೆ ಸಿದ್ಧಾಪುರ ಗ್ರಾಮ ಪಂಚಾಯತಿಯ ಸಭಾಂಗಣದಲ್ಲಿ ಉಪ ವಿಭಾಗಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಮತ್ತೊಮ್ಮೆ ನಿವೇಶನಗಳನ್ನು ಸಂಬಂಧಪಟ್ಟ ಸಂತ್ರಸ್ತರುಗಳಿಗೆ ಹಂಚಲು ಸಭೆ ಆಯೋಜಿಸಲಾಗಿದೆ. ಆದ್ದÀರಿಂದ ಈಗಾಗಲೇ ತಿಳುವಳಿಕೆ ನೀಡಿರುವಂತೆ ಸಂಬಂಧಪಟ್ಟ ಸಂತ್ರಸ್ತರುಗಳು ಹಾಜರಾಗಲು ಕೋರಿದೆ.

ಒಂದು ವೇಳೆ ಸಂತ್ರಸ್ತರುಗಳು ಪುನಃ ಸಭೆಗೆ ಹಾಜರಾಗದಿದ್ದಲ್ಲಿ ಅವರು ಗಳಿಗೆ ನಿವೇಶನಗಳ ಅವಶ್ಯಕತೆ ಇಲ್ಲವೆಂದು ತಿಳಿದು, ಈ ನಿವೇಶನಗಳನ್ನು ವಸತಿ ರಹಿತರಿಗೆ ಹಂಚಲು ಕ್ರಮ ವಹಿಸಲಾಗುವುದೆಂದು ತಿಳಿಯುವುದು ಹಾಗೂ ಈ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ವಾಸದ ಮನೆ ಕಟ್ಟಿಕೊಂಡಿರುವ ಪ್ರವಾಹ ಸಂತ್ರಸ್ತರಿಗೆ ಇನ್ನು ಮುಂದೆ ಸರ್ಕಾರದಿಂದ ಯಾವುದೇ ರೀತಿಯ ಪ್ರಕೃತಿ ವಿಕೋಪ ಸಂಬಂಧದ ಪರಿಹಾರ ನೀಡುವುದಿಲ್ಲ ಎಂದು ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಹೇಳಿದ್ದಾರೆ.