ಕುಶಾಲನಗರ, ಮಾ. 3: ಕುಶಾಲನಗರ ಸಮೀಪದ ಬಸವನಹಳ್ಳಿ ಗಿರಿಜನ ದೊಡ್ಡ ಪ್ರಮಾಣದ ವಿವಿದ್ದೋದ್ಧೇಶ ಸಹಕಾರ ಸಂಘದ ನೂತನ ಸಾಲಿನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಆರ್.ಕೆ. ಚಂದ್ರು ಅವಿರೋಧವಾಗಿ ಆಯ್ಕೆಯಾದರು.

ಬಸವನಹಳ್ಳಿ ಲ್ಯಾಂಪ್ಸ್ ಸೊಸೈಟಿ ಸಭಾಂಗಣದಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆರ್.ಕೆ. ಚಂದ್ರು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಎಸ್. ಮನು ನಾಮಪತ್ರ ಸಲ್ಲಿಸಿದ್ದರು. ಇಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಈ. ಮೋಹನ್ ಘೋಷಣೆ ಮಾಡಿದರು.

ಚುನಾವಣಾ ಪ್ರಕ್ರಿಯೆಯಲ್ಲಿ ನಿರ್ದೇಶಕರಾದ ಎಸ್.ಎನ್. ರಾಜಾರಾವ್, ಸಿ.ಕೆ. ಉದಯಕುಮಾರ್, ಕಾವೇರಿ, ಅಣ್ಣಯ್ಯ, ಬಿ.ಆರ್. ಸುರೇಶ್, ಬಿ.ಎಂ. ಯಶೋಧ, ಎಸ್.ಆರ್. ಕಮಲ, ಕುಶಾಲನಗರ ಆರ್‍ಎಫ್‍ಓ ಅನನ್ಯ ಕುಮಾರ್, ಸರಕಾರದ ನಾಮ ನಿರ್ದೇಶಿತ ಸದಸ್ಯ ಬಿ.ಬಿ. ಮಹೇಶ್, ಮಹಾಮಂಡಳದಿಂದ ನಾಮನಿರ್ದೇಶಿತ ಸದಸ್ಯ ರಾಮನಾಥ್ ಸಿದ್ದಿಸುಬ್ಬ ಪಾಲ್ಗೊಂಡಿದ್ದರು.