ಚೆಟ್ಟಳ್ಳಿ, ಮಾ. 1: ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚೆನ್ನಯ್ಯನ ಕೋಟೆ ಸರ್ಕಾರಿ ಶಾಲೆಯ ಶಿಕ್ಷಕಿ ಬಿ.ಬಿ ಜಾಜಿ ಮೋಹನ್ ಆಯ್ಕೆಯಾಗಿದ್ದಾರೆ .

ಇತ್ತೀಚೆಗೆ 2019-20 ನೇ ಸಾಲಿನ ಜಿಲ್ಲಾ ಮಟ್ಟದಲ್ಲಿ ನಡೆದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಾರದ ಗುಂಡು ಎಸೆತ ,ಈಜು ಸ್ಪರ್ಧೆ, ಥ್ರೋಬಾಲ್ , ಜನಪದ ನೃತ್ಯದಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಇದೀಗ ಧಾರವಾಡದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಥ್ರೋಬಾಲ್ ಹಾಗೂ ಜನಪದ ನೃತ್ಯದ ತಂಡದಲ್ಲಿ ಜಾಜಿ ಅವರೊಂದಿಗೆ ಜಿಲ್ಲೆಯ ಸ್ಮಿತಾ, ಸುಮಿ, ರೀನಾ, ವಾಮನ, ಪದ್ಮಾ, ಲೀಲಾವತಿ, ನಿರ್ಮಲ, ಭಾಗ್ಯ, ಸೆಲಿಸ್ಟಿನಾ ಲೋಬೋ, ಕರುಣಾ, ವಿನೀತಾ, ರೋಸಿ, ತ್ಯಾಗರಾಜು, ಅಶೋಕ್‍ಕುಮಾರ್ ಭಾಗವಹಿಸಿದ್ದಾರೆ.

ರಾಜ್ಯ ಪ್ರಶಸ್ತಿ ವಿಜೇತೆ ಶಿಕ್ಷಕಿಯಾಗಿರುವ ಜಾಜಿ ಬಾರದ ಗುಂಡು ಎಸೆತ ರಿಲೇ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರ ,ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಾಧನೆ ಮಾಡಿ. ಕರ್ನಾಟಕದ ಅಥ್ಲೆಟಿಕ್ ತಂಡದ ಟೀಂ ಮ್ಯಾನೇಜರ್ ಆಗಿಯೂ ಆಯ್ಕೆಯಾಗಿದ್ದಾರೆ. ಇವರು ಕ್ರೀಡೆ, ಸಾಂಸ್ಕೃತಿಕ,ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸ್ಕೌಟ್ಸ್ ಗೈಡ್ಸ್ ನಲ್ಲೂ ತೊಡಗಿಸಿಕೊಂಡಿದ್ದು. ಸಿದ್ದಾಪುರ ಸಮೀಪದ ಇಂಜಿಲಗೆರೆ ನಿವಾಸಿ ಅಂಚೆ ಉದ್ಯೋಗಿ ಮೋಹನ್ ಕುಮಾರ್ ಅವರ ಪತ್ನಿ.