ಗೋಣಿಕೊಪ್ಪ, ಮಾ. 1: ಜೆನ್ ಶಿಟಾರಿಯೋ ರ್ಯು ಕರಾಟೆ ಸ್ಕೂಲ್ ವತಿಯಿಂದ ಇತ್ತೀಚೆಗೆ ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಇಂಟರ್ ದೋಜೋ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಟಿ. ಶೆಟ್ಟಿಗೇರಿ ರೂಟ್ಸ್ ಶಾಲೆಯ ಮೂವರು ಕರಾಟೆಪಟುಗಳಿಗೆ ಪದಕ ಲಭಿಸಿವೆ. ಆರೆಂಜ್ ಬೆಲ್ಟ್ ವಿಭಾಗದಲ್ಲಿ ಭೂಷಿತ ಬೋಜಮ್ಮಗೆ ಚಿನ್ನ, ಕುಮಿಟೆ ವಿಭಾಗದಲ್ಲಿ ಕಂಚು, ಕಟಾದಲ್ಲಿ ಡಿಂಪಲ್ ಸೀತಮ್ಮಗೆ ಚಿನ್ನ, ನೇಹಲ್ ನಾಚಪ್ಪಗೆ ಕಂಚು ಲಭಿಸಿವೆ. ಇವರಿಗೆ ಕಳ್ಳಿಕಂಡ ಕಿಶೋರ್ ತರಬೇತಿ ನೀಡಿದ್ದಾರೆ.