ಶನಿವಾರಸಂತೆ, ಮಾ. 1: ಶನಿವಾರಸಂತೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಪಂಚಾಯಿತಿ ಕಛೇರಿ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷ ಎಂ.ಹೆಚ್. ಮಹಮ್ಮದ್ ಗೌಸ್ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆ ಹಾಗೂ ಪ್ಲಾಸ್ಟಿಕ್ ಕೈಚೀಲಗಳ ನಿಷೇದದÀ ಬಗ್ಗೆ ಚರ್ಚಿಸಲಾಯಿತು.

ದಿನ, ಬಿಟ್ಟು ದಿನ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾರ್ಡ್‍ಗಳಿಗೂ ಟ್ರ್ಯಾಕ್ಟರ್ ಕಳುಹಿಸಿ, ಹಸಿ ಕಸ ಹಾಗೂ ಒಣಕಸವನ್ನು ಬೇರ್ಪಡಿಸಿ ಕಸ ಸಂಗ್ರಹಿಸುವಂತೆ ಸಭೆ ತೀರ್ಮಾನಿಸಿತು ಹಾಗೂ ಈಗಾಗಲೇ ಪ್ಲಾಸ್ಟಿಕ್ ಕೈಚೀಲಗಳನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಷೇದಿಸಲಾಗಿದೆ, ಆದರು ಕೆಲವು ಅಂಗಡಿ ಹೊಟೇಲ್‍ನವರು ಗ್ರಾಹಕರಿಗೆ ಪ್ಲಾಸ್ಟಿಕ್ ಕೈಚೀಲಗಳನ್ನು ನೀಡುತ್ತಿದ್ದಾರೆ. ಅದೇ ರೀತಿ ಪ್ಲಾಸ್ಟಿಕ್ ಕೈ ಚೀಲಗಳನ್ನು ಮಾರಾಟ ಮಾಡುತ್ತಿದ್ದರೆ ಅಂತವರಿಗೆ ರೂ. 500/- ದಂಡ ವಿಧಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಹಾಗೂ ಪ್ರತೀ ಅಂಗಡಿ ಹೊಟೇಲ್‍ಗಳಲ್ಲಿ ಪ್ಲಾಸ್ಟಿಕ್ ಮಾರಾಟದ ಬಗ್ಗೆ ಪರಿಶೀಲಿಸಲು, ಗ್ರಾಮಪಂಚಾಯಿತಿ ಸಿಬ್ಬಂದಿಗಳಿಗೆ ಸೂಚಿಸಲಾಯಿತು.

2020-2021ನೇ ಸಾಲಿನ ಹಸಿ ಮೀನು, ಕುರಿಮಾಂಸ, ಹಂದಿಮಾಂಸ, ಮಾರ್ಕೆಟ್ ಸುಂಕ ವಸೂಲಿ ಇತ್ಯಾದಿಗಳ ಹರಾಜನ್ನು ಮಾರ್ಚ್ 16 ಕ್ಕೆ ಟೆಂಡರ್ ಮಾಡಲು ತಿರ್ಮಾನಿಸಲಾಯಿತು.

ಪಂಚಾಯಿತಿ ಉಪಾಧ್ಯಕ್ಷೆ ಗೀತಾಹರೀಶ್, ಸದಸ್ಯರುಗಳಾದ ಸೌಭಾಗ್ಯಲಕ್ಷ್ಮಿ, ಉಷಾಜಯಸ್, ರಜನಿರಾಜು, ಹೇಮಾವತಿ ಗೋಪಾಲ್, ಹೆಚ್.ಆರ್.ಹರೀಶ್, ಎಸ್.ಎನ್.ಪಾಂಡು, ಸರ್ದಾರ್ ಅಹ್ಮದ್, ಆದಿತ್ಯಾಗೌಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ.ಮೇದಪ್ಪ, ಕಾರ್ಯದರ್ಶಿ ತಮ್ಮಯ್ಯ ಆಚಾರ್, ಲೆಕ್ಕಸಹಾಯಕ ವಸಂತ, ಕಂಪ್ಯೂಟರ್ ನಿರ್ವಾಹಕಿ ಫೌಜಿಯಾ, ಉಪಸ್ಥಿತರಿದ್ದು; ಬಿ.ಜೆ. ಮೇದಪ್ಪ ಸ್ವಾಗತಿಸಿ, ವಂದಿಸಿದರು.