*ಗೋಣಿಕೊಪ್ಪ, ಫೆ. 28: ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ. 42 ಲಕ್ಷ ಅನುದಾನದಲ್ಲಿ ನಡೆಯುವ ವಿವಿಧ ಕಾಮಗಾರಿಗಳಿಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಜಾ ಸಾಜಿ ಚಾಲನೆ ನೀಡಿದರು.

ರೂ. 18 ಲಕ್ಷ ವೆಚ್ಚದ ಕುಡಿಯುವ ನೀರಿನ ಟ್ಯಾಂಕ್ ಕಾಮಗಾರಿ, ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಟೂರು ಗ್ರಾಮದ ಮಹಾದೇವರ ಕಾಲೋನಿಯ ನೀರು ಸರಬರಾಜಿಗೆ ಪೈಪ್‍ಲೈನ್ ಅಳವಡಿಕೆ, ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೂರು ಗ್ರಾಮದ ಕಾಲೋನಿಗೆ ಕುಡಿಯುವ ನೀರಿನ ಸರಬರಾಜು, ಬಲ್ಯಮುಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೂಚಮಕೇರಿ ಗ್ರಾಮದಲ್ಲಿ ಕುಡಿಯುವ ನೀರಿನ ಸರಬರಾಜಿಗೆ ಪೈಪ್‍ಲೈನ್ ಅಳವಡಿಕೆ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಕೆ. ಸೋಮಯ್ಯ, ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಪಂಚಾಯಿತಿ ಅಧ್ಯಕ್ಷೆ ಕೆ.ಆರ್. ಸುಧಾ, ಉಪಾಧ್ಯಕ್ಷೆ ಸುನಿತಾ ಮೋಹನ್, ಸದಸ್ಯರಾದ ಸೂರಜ್, ಗೊಂಬೆ, ರೇಖಾ, ಪಂಚಾಯಿತಿ ಮಾಜಿ ಸದಸ್ಯ ಸಾಜಿ ಅಚ್ಚುತನ್ ಪ್ರಮುಖರಾದ ವಾಸು ಕುಟ್ಟಪ್ಪ, ಪಂಚಾಯಿತಿ ಮಾಜಿ ಅಧ್ಯಕ್ಷ ಮೋಹನ್, ಬಿ.ಎ. ಪ್ರಕಾಶ್, ಮುತ್ತಣ್ಣ, ಕರುಂಬಯ್ಯ ಹಾಗೂ ಗ್ರಾಮಸ್ಥರು ಹಾಜರಿದ್ದರು*ಗೋಣಿಕೊಪ್ಪ, ಫೆ. 28: ರೂ. 1.15 ಲಕ್ಷ ಅನುದಾನದಲ್ಲಿ ನಿರ್ಮಾಣವಾಗುವ ನೂತನ ರಸ್ತೆ ಡಾಂಬರೀಕಾರಣ ಕಾಮಗಾರಿಗಳು ಸರಾಗವಾಗಿ ನಡೆಯಲೆಂದು ಬಾಳೆಲೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಶಾಸಕ ಕೆ.ಜಿ. ಬೋಪ್ಪಯ್ಯ ಅವರು ಭೂಮಿಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ಬಾಳಲೆ ಕಳ್ಳಿಚಂಡ-ಕೈನಾಟಿ ಅಜ್ಜಪ್ಪ ದೇವಸ್ಥಾನ ರಸ್ತೆಗೆ ರೂ. 5 ಲಕ್ಷ ಅನುದಾನದ ಅಭಿವೃದ್ಧಿಗೆ ಶಾಸಕರು ಚಾಲನೆ ನೀಡಿ ನಂತರ ಬಾಳೆಲೆ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳ ಬಗ್ಗೆ ವಿವರ ನೀಡಿದರು. ಜಿ.ಪಂ. ಇಂಜಿನಿಯರ್ ವಿಭಾಗದಿಂದ ದೇವನೂರು ಚೌಕಳ್ಳಿ ರಸ್ತೆಗೆ ರೂ. 10 ಲಕ್ಷ, ಸುಳುಗೋಡು ಕಳ್ಳಿಚಂಡ-ಮುದ್ದಿಯಡ ಕುಟುಂಬದ ರಸ್ತೆಗೆ ರೂ. 8 ಲಕ್ಷ, ಸುಳುಗೋಡು ಪರಿಶಿಷ್ಟ ಜಾತಿ ಕಾಲೋನಿ ರಸ್ತೆಗೆ ರೂ. 15 ಲಕ್ಷ, ರಾಜಾಪುರ ಮುಖ್ಯ ರಸ್ತೆಯಿಂದ ತಾವರೆಕೆರೆ ಹೋಗುವ ರಸ್ತೆಗೆ ರೂ. 5 ಲಕ್ಷ, ಕೈನಾಟಿಯಿಂದ ಕಾಂಡೇರ ಮತ್ತು ಪೆÇೀಡುಮಾಡ ಕುಟುಂಬದ ರಸ್ತೆಗೆ ರೂ. 5 ಲಕ್ಷ, ಸುಳುಗೋಡು ಕಾಡ್ಯಮಾಡ ರಸ್ತೆ ಗೆ ರೂ. 5 ಲಕ್ಷ, ರಾಜಪುರದಿಂದ ಬ್ಯಾಟರಾಯನಕೊಪ್ಪ ರಸ್ತೆಗೆ ರೂ. 5 ಲಕ್ಷ, ಸುಳುಗೋಡು ಗಿರಿಜನ ಕಾಲೋನಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ರೂ. 2 ಲಕ್ಷ, ದೇವನೂರು ಮಲ್ಲೂರು ರಸ್ತೆಗೆ ರೂ. 5 ಲಕ್ಷ, ಸುಳುಗೋಡು ಪೆÇನ್ನಪ್ಪಸಂತೆ ಸಂಪರ್ಕ ಕಲ್ಪಿಸುವ ಅದುರು ಮಾಡ ಸೇತುವೆ ನಿರ್ಮಾಣಕ್ಕೆ ರೂ. 20 ಲಕ್ಷ ಹೀಗೆ ಒಟ್ಟು ರೂ. 85 ಲಕ್ಷದಲ್ಲಿ ಕಾಮಗಾರಿಗಳು ನಡೆಯಲಿದೆ. ಇದರೊಂದಿಗೆ ಲೋಕೋಪಯೋಗಿ ಇಲಾಖೆ ವತಿಯಿಂದ ರೂ. 30 ಲಕ್ಷದಲ್ಲಿ ಮಲ್ಲೂರು ಸಂಪರ್ಕ ರಸ್ತೆಗೆ ರೂ. 10 ಲಕ್ಷ, ಚಾಮುಂಡಿ ದೇವಸ್ಥಾನ ರಸ್ತೆಗೆ ರೂ. 10 ಲಕ್ಷ, ಅದುರುಮಾಡ ಸಂಪರ್ಕ ರಸ್ತೆಗೆ ರೂ. 5 ಲಕ್ಷ, ರಾಜಪುರ ಕೂಡ ಬಯಲು ಕುಡುಂಗೂರು ರಸ್ತೆಗೆ ರೂ. 5 ಲಕ್ಷದಂತೆ ಕಾಮಗಾರಿಗಳು ನಡೆಯಲಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ವರ್ತಕರ ಪ್ರಕೋಷ್ಠ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಯಮುನ ಚಂಗಪ್ಪ, ಅಕ್ರಮ-ಸಕ್ರಮ ಸಮಿತಿ ಸದಸ್ಯ ಲಾಲಾ ಭೀಮಯ್ಯ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸುಜಾ ಪೂಣಚ್ಚ, ಮಾಜಿ ಅಧ್ಯಕ್ಷ ವಿನು ಚಂಗಪ್ಪ, ಬಾಳೆಲೆ ಸ್ಥಾನೀಯ ಸಮಿತಿ ಅಧ್ಯಕ್ಷ ಸುಕೇಶ್, ಪ್ರಮುಖರಾದ ಕೃಷ್ಣ, ಗಣಪತಿ ಅಡ್ಡೆಂಗಡ ಅರುಣ್ ಅಜಯ್, ನವೀನ್ ಕಾಡ್ಯಮಾಡ ಗಣಪತಿ, ಉದಯ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ, ಸಾಮಾಜಿಕ ಜಾಲತಾಣದ ಸಂಚಾಲಕ ಚಟ್ಟಂಗಡ ಮಹೇಶ್ ಮಂದಣ್ಣ, ಇಂಜಿನಿಯರ್ ಮಹದೇವ್ ಉಪಸ್ಥಿತರಿದ್ದರು.*ಗೋಣಿಕೊಪ್ಪ, ಫೆ. 28: ರೂ. 1.99 ಕೋಟಿ ಅನುದಾನದಲ್ಲಿ ನಿರ್ಮಾಣವಾಗುವ ನೂತನ ರಸ್ತೆ ಡಾಂಬರಿಕಾರಣ ಮತ್ತು ಪೂರ್ಣಗೊಂಡ ಕಾಮಗಾರಿಗಳಿಗೆ ನಿಟ್ಟೂರು ಗ್ರಾಪಂ. ವ್ಯಾಪ್ತಿಯಲ್ಲಿ ಶಾಸಕ ಕೆ.ಜಿ. ಬೋಪ್ಪಯ್ಯ ಅವರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಜಿ.ಪಂ. ಇಂಜಿನಿಯರ್ ವಿಭಾಗದಿಂದ ರೂ. 74 ಲಕ್ಷ ಅನುದಾನಗಳಲ್ಲಿ ರೂ. 15 ಲಕ್ಷದಲ್ಲಿ ಮಹಲಿಂಗೇಶ್ವರ ದೇವಸ್ಥಾನ ರಸ್ತೆ, ರೂ. 8 ಲಕ್ಷದಲ್ಲಿ ಪಾಲದಳ ತಟ್ಟಕೇರಿ ರಸ್ತೆ, ರೂ. 5 ಲಕ್ಷದಲ್ಲಿ ಕಾಟಿಮಾಡ, ಮಚ್ಚಿಮಾಡ ಕುಟುಂಬಸ್ಥರ ರಸ್ತೆ, ರೂ. 5 ಲಕ್ಷ ಅಳಮೇಂಗಡ ರೋಷನ್ ಕುಟುಂಬಸ್ಥರ ರಸ್ತೆ, ರೂ. 5 ಲಕ್ಷ ಕೊಟ್ಟಗೇರಿ ಜೈಹಿಂದ್ ರಸ್ತೆ, ರೂ. 5 ಲಕ್ಷ ಅಳಮೇಂಗಡ ಸೋಮಯ್ಯರವರ ರಸ್ತೆ, ರೂ. 8 ಲಕ್ಷದಲ್ಲಿ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ, ರೂ. 5 ಲಕ್ಷದಲ್ಲಿ ದಾಳಿಂಬೆ ಕಾಲೋನಿ, ಶಾಂತಮೊಟ್ಟೆ, ಪರಿಶಿಷ್ಟ ಕಾಲೋನಿ ರಸ್ತೆ, ರೂ. 3 ಲಕ್ಷ ಮಹಾವಿಷ್ಣು ದೇವಸ್ಥಾನ ರಸ್ತೆ, ರೂ. 10 ಲಕ್ಷದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗಳು ಹಾಗೂ ಲೋಕೋಪಯೋಗಿ ಇಲಾಖೆ ವತಿಯಿಂದ ರೂ. 1 ಕೋಟಿ 25 ಲಕ್ಷ ಅನುದಾನದಲ್ಲಿ ರೂ. 10 ಲಕ್ಷದಲ್ಲಿ ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿ, ರೂ. 10 ಲಕ್ಷದಲ್ಲಿ ಮಾಪಂಗಡ ಸಾರ್ವಜನಿಕ ಸಂಪರ್ಕ ರಸ್ತೆ, ರೂ. 10 ಲಕ್ಷದಲ್ಲಿ ಬೊಟ್ಟಂಗಡ, ಕೊಟ್ಟಂಗಡ ಸಾರ್ವಜನಿಕ ರಸ್ತೆ, ರೂ. 45 ಲಕ್ಷದಲ್ಲಿ ನಿಟ್ಟೂರು ಕೊಲ್ಲಿಯಾಡಿ ರಸ್ತೆ ಅಭಿವೃದ್ಧಿ, ರೂ. 50 ಲಕ್ಷದಲ್ಲಿ ಕಾಲಭೈರೇಶ್ವರ ದೇವಸ್ಥಾನದ ರಸ್ತೆ ಅಭಿವೃದ್ಧಿ ನಡೆಯಲಿದೆ ಎಂದು ಈ ಸಂದರ್ಭ ಶಾಸಕರು ಮಾಹಿತಿ ನೀಡಿದರು. ಜಿಲ್ಲಾ ವರ್ತಕರ ಪ್ರಕೋಷ್ಠ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸುಜಾ ಪೂಣಚ್ಚ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಯಮನ ಚಂಗಪ್ಪ, ಅಕ್ರಮ-ಸಕ್ರಮ ಸಮಿತಿ ಸದಸ್ಯ ಲಾಲಾ ಭೀಮಯ್ಯ, ಮಾಜಿ ಅಧ್ಯಕ್ಷ ವಿನು ಚಂಗಪ್ಪ, ಬಾಳಲೆ ಸ್ಥಾನೀಯ ಸಮಿತಿ ಅಧ್ಯಕ್ಷ ಸುಕೇಶ್, ಪ್ರಮುಖರಾದ ಕೃಷ್ಣ, ಗಣಪತಿ, ಅಡ್ಡೆಂಗಡ ಅರುಣ್, ಅಜಯ್, ನವೀನ್, ಕಾಡ್ಯಮಾಡ ಗಣಪತಿ, ಉದಯ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ ಸಾಮಾಜಿಕ ಜಾಲತಾಣದ ಸಂಚಾಲಕ ಚಟ್ಟಂಗಡ ಮಹೇಶ್ ಮಂದಣ್ಣ, ಇಂಜಿನಿಯರ್ ಮಹದೇವ್, ಗ್ರಾಮಸ್ಥರಾದ ಗಾಂಣಗಡ ತಿಮ್ಮಯ್ಯ, ಅರಮಾಣಮಾಡ ಸಂತೋಷ್, ಅಳಮೇಂಗಡ ದಿಲ್ಲು, ಮಾಪಂಗಡ ಸಂಪತ್, ಅಳಮೇಂಗಡ ದರ್ಶನ, ಗಾಣಂಗಡ ಮೋಹನ್, ಮಾಚಂಗಡ ಅಯ್ಯಪ್ಪ ಉಪಸ್ಥಿತರಿದ್ದರು.