ಸೋಮವಾರಪೇಟೆ, ಫೆ. 28: ಇಲ್ಲಿನ ತಥಾಸ್ತು ಸಾತ್ವಿಕ ಸಂಸ್ಥೆಯ ವತಿಯಿಂದ ಸ್ಥಳೀಯ ಮಾನಸ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕನ್ನಡ ಜನಪÀದೋತ್ಸವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶನಿವಾರಸಂತೆಯ ವಿಘ್ನೇಶ್ವರ ಬಾಲಿಕಾ ಪ್ರೌಢಶಾಲÉಯ ಮುಖ್ಯ ಶಿಕ್ಷಕ ಜಯಕುಮಾರ್ ಮಾತನಾಡಿ, ಮಕ್ಕಳಿಗೆ ಮೌಲ್ಯಯುತ ಮತ್ತು ಉತ್ತಮ ಸಂಸ್ಕಾರದ ವಿದ್ಯೆ ಕಲಿಸಿದರೆ ಮಾತ್ರ ಸಮಾಜದಲ್ಲಿ ಅವರು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದು ಅಭಿಪ್ರಾಯಿಸಿದರು.

ಪೋಷಕರು ತಮ್ಮ ಮಕ್ಕಳಿಗೆ ನಮ್ಮ ಸಂಸ್ಕøತಿಯ ಆಚಾರ ವಿಚಾರಗಳು, ಭಾರತೀಯ ನೃತ್ಯ ಪ್ರಾಕಾರಗಳನ್ನು ಕಲಿಸಬೇಕು. ತಂತ್ರಜ್ಞಾನ ಎಷ್ಟೇ ವೇಗವಾಗಿ ಬೆಳೆದರೂ ನಮ್ಮ ಸಂಸ್ಕøತಿಯನ್ನು ನಾವು ಉಳಿಸಿಕೊಳ್ಳುವ ಸಂಕಲ್ಪ ಮಾಡಿಕೊಳ್ಳಬೇಕು. ಸಂಸ್ಕøತಿಯ ಮೂಲ ನಮ್ಮ ಜನಪದದಲ್ಲಿ ಅಡಗಿದೆ ಎಂದರು.

ಆಲೂರುಸಿದ್ದಾಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪಾನ್ಯಾಸಕ ಗಣಪತಿ ಭಟ್ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು. ಪ್ರಸ್ತುತ ಕಾರ್ಗಿಲ್‍ನಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧ ಲೋಕೇಶ್ ಮಾತನಾಡಿ, ದೇಶಕ್ಕೆ ಸೈನಿಕರ ಕೊಡುಗೆ ಎಷ್ಟಿದೆಯೋ, ದೇಶದ ಅಭಿವೃದ್ಧಿ ಮತ್ತು ಆಂತರಿಕ ರಕ್ಷಣೆಯಲ್ಲಿ ಪ್ರತಿಯೊಬ್ಬ ಪ್ರಜೆಗಳ ಕೊಡುಗೆಯೂ ಅಷ್ಟೇ ಇದೆ. ಪ್ರಜೆಗಳಾದ ನಾವು ದೇಶಕ್ಕೆ ನೀಡಬೇಕಾದ ಕೊಡುಗೆ ಏನು? ಎಂಬ ಬಗ್ಗೆ ಅರಿವು ಹೊಂದಬೇಕು ಎಂದರು.

ಭಾರತೀಯ ಸಂಸ್ಕøತಿಯಲ್ಲಿ ಜನಪದ ಕುರಿತು ವಿದ್ಯಾರ್ಥಿನಿ ಚೈನಿ ಕಾಳಪ್ಪ ವಿಚಾರ ಮಂಡಿಸಿ, ಸಂಸ್ಕøತಿಯ ಬೇರು ಜನಪದದಲ್ಲಿದೆ. ತಂತ್ರಜ್ಞಾನದ ಆಧುನಿಕತೆಯಲ್ಲಿ ಕಳೆದುಹೋಗಿರುವ ನಾವು ಜನಪದದಲ್ಲಿ ಸಂಸ್ಕøತಿಯನ್ನು ಬೆಳಗಿಸಬೇಕಾಗಿದೆ ಎಂದರು. ಬಾಲ ಪ್ರತಿಭೆ ಆಪ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಥಾಸ್ತು ಸಂಸ್ಥೆಯ ಅಧ್ಯಕ್ಷ ರವೀಂದ್ರ ಹಾನಗಲ್ಲು ವಹಿಸಿದ್ದರು.

ಜನಪದೋತ್ಸವದಲ್ಲಿ ಸೋಬಾನೆ ಪದ, ಸುಗ್ಗಿ ಕುಣಿತ, ಎರವರ ಕುಣಿತ, ಕೊಡವ ನೃತ್ಯ, ಕೊಳಲು ವಾದನ, ಜನಪದ ಗೀತೆಗಳು, ಭಾವ ಗೀತೆಗಳು, ಏಕಪಾತ್ರಾಭಿನಯ ಸೇರಿದಂತೆ ಇನ್ನಿತರ ಪ್ರದರ್ಶನ ನಡೆದವು. ಉಡುಪಿಯ ಯಕ್ಷಗಾನ ತಂಡದವರಿಂದ ‘ವೀರ ಅಭಿಮನ್ಯು ಕಾಳಗ’ ಎಂಬ ಕಥಾರೂಪಕದ ಯಕ್ಷಗಾನ ನಡೆಯಿತು.