ಮರಗೋಡು, ಫೆ. 28: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮರಗೋಡು ಗ್ರಾಮದ ಶ್ರೀ ಶಿವಪಾರ್ವತಿ ದೇವಸ್ಥಾನ ಹಾಗೂ ಶ್ರೀ ಗಣಪತಿ ದೇವಸ್ಥಾನಕ್ಕೆ ಹಸಿ ಕಸ ಹಾಗೂ ಒಣ ಕಸ ಸಂಗ್ರಹಿಸುವ ಬುಟ್ಟಿಗಳನ್ನು ಉಚಿತವಾಗಿ ವಿತರಿಸಲಾಯಿತು.

ಶ್ರೀ ಕ್ಷೇತ್ರದ ‘ಎ’ ಒಕ್ಕೂಟದ ಸೇವಾಪ್ರತಿನಿಧಿ ಲತಾ ಮತ್ತು ಇತರ ಪದಾಧಿಕಾರಿಗಳು ಕಸದ ಬುಟ್ಟಿಗಳನ್ನು ವಿತರಿಸಿದರು. ಶಿವಪಾರ್ವತಿ ದೇವಸ್ಥಾನದ ಪರವಾಗಿ ತಾತಪಂಡ ಸುಬ್ಬಯ್ಯ ಅವರು ಕಸದ ತೊಟ್ಟಿ ಸ್ವೀಕರಿಸಿದರು. ಗಣಪತಿ ದೇವಸ್ಥಾನದ ಪರವಾಗಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಸಿ ಬಸಪ್ಪ ಕಸದ ತೊಟ್ಟಿ ಸ್ವೀಕರಿಸಿದರು. ಈ ಸಂದರ್ಭ ಊರಿನ ಪ್ರಮುಖರಾದ ಎಂ.ಕೆ. ದೇವಯ್ಯ, ಎಂ.ಕೆ. ವೆಂಕಟೇಶ, ರಾಮಯ್ಯ ಎಂ.ಟಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು.