ಚೆಟ್ಟಳ್ಳಿ, ಫೆ. 28: ನಿವೃತ್ತ ಮುಖ್ಯೋಪಾಧ್ಯಾಯರಾದ ಪಿ.ಜಿ ಅಂಬೆಕಲ್ ಹಾಗೂ ಕನಕ.ಪಿ.ಅಂಬೆಕಲ್ ಅವರು ಬರೆದ ‘ನಿನ್ನ ಪ್ರೇಮ ಪರಿಯ’ ಎಂಬ ಕಥಾ ಸಂಕಲನ ಲೋಕಾರ್ಪಣಾ ಸಮಾರಂಭ ತಾ. 29ರಂದು (ಇಂದು) ಪೂರ್ವಾಹ್ನ 10.30ಕ್ಕೆ ಚೆಟ್ಟಳ್ಳಿ ಪ್ರೌಢಶಾಲೆಯ ಮಂಗಳ ಸಭಾಂಗಣದಲ್ಲಿ ನಡೆಯಲಿದೆ.
ಚೆಟ್ಟಳ್ಳಿ ಪ್ರೌಢಶಾಲಾ ಆಡಳಿತಮಂಡಳಿಯ ಅಧ್ಯಕ್ಷ ಪಿ.ಪಿ. ಜಯಾನಂದ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಬಿ.ಆರ್.ಜೋಯಪ್ಪ ಪುಸ್ತಕಲೋಕಾರ್ಪಣೆ ಮಾಡಲಿರುವರು. ಲೀಲಾದಾಮೋದರ, ಚೆಟ್ಟಳ್ಳಿ ಪ್ರೌಢ ಶಾಲಾ ಸಂಚಾಲಕ ಎಂ.ಎಂ.ಚಂಗಪ್ಪ ಬಂಟಮಲೆ ಅಕಾಡೆಮಿ ಅಧ್ಯಕ್ಷ ಎ.ಕೆ.ಹಮಕರ ಭಾಗವಹಿಸಲಿರುವರು.