ಮಡಿಕೇರಿ, ಫೆ.28: ಕುಶಾಲನಗರ 220/11 ಕೆ.ವಿ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ 11 ಕೆ.ವಿ.ಫೀಡರ್ಗಳಲ್ಲಿ ಐಪಿಡಿಎಸ್(ವಿದ್ಯುತ್ ಜಾಲದ ಸಮಗ್ರ ಅಭಿವೃದ್ದಿ ಯೋಜನೆ) ಕಾಮಗಾರಿ ಕೈಗೊಳ್ಳಬೇಕಾಗಿರುವುದರಿಂದ ತಾ. 29 ರಂದು (ಇಂದು) ಎಫ್1-ಕಾವೇರಿ 220/11 ಕೆ.ವಿ ಕುಶಾಲನಗರ ಭಾಗದ ಗುಡ್ಡೆಹೊಸೂರು ಬಸವನಹಳ್ಳಿ, ಮಾದಪಟ್ಟಣ, ಎಫ್ 9 ಬಲಮುರಿ 66/11 ಕೆ.ವಿ ಕಂಬಿಬಾಣೆ ಕೊಡಗರ ಹಳ್ಳಿ, ಉಪ್ಪುತೋಡು, ಎಫ್13 ಎಸ್.ಎಲ್.ಎನ್ 66/11 ಕೆ.ವಿ ಎಸ್.ಎಲ್.ಎನ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ ಮಾರ್ಚ್, 1 ರಂದು ಎಫ್2 ಭುವನಗಿರಿ 220/11 ಕೆ.ವಿ ಕುಶಾಲನಗರ ವಿಭಾಗದ ಅತ್ತೂರು ಹಾರಂಗಿ, ಎಫ್ 6 ಇಂಡಸ್ಟ್ರಿಯಲ್ ಏರಿಯಾ 220/11 ಕೆ.ವಿ ಇಂಡಸ್ಟ್ರಿಯಲ್ ಕೂಡಿಗೆ ಮತ್ತು ಎಫ್8 ಹೆಬ್ಬಾಲೆ 66/11 ಕೆ.ವಿ ಕುಶಾಲನಗರ ವಿಭಾಗದ ಹೆಬ್ಬಾಲೆ ತೊರೆನೂರು ಶಿರಂಗಾಲ ಸುತ್ತಮುತ್ತಲಿನ ಹಾಗೂ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಸೋಮಶೇಖರ್ ತಿಳಿಸಿದ್ದಾರೆ.