ಚೆಟ್ಟಳ್ಳಿ, ಫೆ. 27: ಪುರಾತನ ಇತಿಹಾಸ ಹೊಂದಿರುವ ಮಳೆದೇವರೆಂದೇ ಪ್ರಸಿದ್ಧಿ ಪಡೆದ ಚೆಟ್ಟಳ್ಳಿಯ ಶ್ರೀಮಂಗಲ ಶ್ರೀ ಭಗವತಿ ದೇವಾಲಯದ ನವೀಕರಣ ಪುನರ್ ಪ್ರತಿಷ್ಠಾಪನೆ ಮತ್ತು ಅಷ್ಟಬಂಧ ಬ್ರಹ್ಮಕಲಶೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ಶ್ರೀ ರಾಮಚಂದ್ರ ಭಟ್, ಕಗ್ಗೋಡು ಭಗವತಿ ದೇವಾಲಯ ಅರ್ಚಕರ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಶಿಲುವಾಲಮೂಲೆ ಶ್ರೀ ಶಿವ ಸುಬ್ರಮಣ್ಯ ಭಟ್ ತಂತ್ರಿಗಳ ನೇತೃತ್ವದಲ್ಲಿ ದೇವಾಲಯದ ಪುನರ್ ಪ್ರತಿಷ್ಠಾನ ಅಷ್ಟಬಂಧ ಬ್ರಹ್ಮಕಲ ಶೋತ್ಸವ ಕಾರ್ಯ ನೆರವೇರಿತು. ತಾ. 24 ರಂದು ಪೂರ್ವಾಹ್ನ ತಂತ್ರಿಗಳ ಆಗಮನ ಕುಂಭ ಸ್ವಾಗತದೊಂದಿಗೆ ಪುಣ್ಯಾಹ, ಗೋನಿವಾಸ ಸಪ್ತಶುದ್ದಿ ಮೃತ್ಯುಂಜಯ ಹವನ, ಕೂಷ್ಮಾಂಡೀ ಪ್ರಾಯಶ್ಚಿತ ಅಂಕುರ ಪೂಜೆ, ಪೂರ್ಣಾಹುತಿ, ಪ್ರಸಾದ ವಿತರಣೆ. ಸಂಜೆ ರಾಕ್ಷೋಘ್ನ ಹವನ, ವಾಸ್ತುಪೂಜೆ, ವಾಸ್ತುಹವನ, ವಾಸ್ತುಬಲಿ, ಸುದರ್ಶನ ಹವನ, ಬಾಧಾಮೂರ್ತಿಗೆ ಉಚ್ಚಾಟನೆ, ಪ್ರೇತಾಕರ್ಷಣೆ, ಮಂಗಳಾರತಿ ಪ್ರಸಾದ ವಿನಿಯೋಗ ನೆರವೇರಿತು.
ತಾ. 25 ರಂದು ಬೆಳಿಗ್ಗೆಯಿಂದ ತಿಲಹವನ, ಗಣಪತಿ ಅಥರ್ವಶೀಷ ಹವನ, ತತ್ವಹೋಮ, ಕವಾಥೋದ್ಬವ ಪೂಜೆ, ಅಂಕುರ ಪೂಜೆ, ಪೂರ್ಣಾಹುತಿ ಪ್ರಸಾದ, ಅನ್ನದಾನ. ಸಂಜೆ ಕಲಶಗಳ ಪ್ರತಿಷ್ಠೆ ಬಿಂಬಗಳ ಶುದ್ದಿ, ಅದ್ಬುತ ಶಾಂತಿ ಪಾರಾಯಣ ಗಣ, ಜಲಾಧಿವಾಸ, ಧಾನ್ಯಾಯದಿ ವಾಸ ಪೂಜೆ, ಹವನ ಪೂರ್ಣಾಹುತಿ, ಪ್ರಸಾದ ವಿನಿಯೋಗ ನೆರವೇರಿತು.
ತಾ. 26 ರಂದು ಪ್ರತಿಷ್ಠಾಂಗ ಹವನ, ಗಣಪತಿ ಹವನ, ಪೂರ್ಣಾಹುತಿ, ಕಲಶಾಭೀಷೇಕ, ಕವಾಥೋದ್ಬವ ಪೂಜೆ, ಅಂಕುರ ಪೂಜೆ. ಪೂವಾಹ್ನ 11ಕ್ಕೆ ವೃಷಭ ಲಗ್ನದಲ್ಲಿ ಅಷ್ಟಬಂಧ ಬ್ರಹ್ಮಕಲ ಶಾಭಿಷೇಕ, ಮಧ್ಯಾಹ್ನ ಮಂಗಳಾರತಿ, ಪ್ರಸಾದ, ಮಂತ್ರಾಕ್ಷತೆ, ಅನ್ನದಾನ ನೆರವೇರಿತು. - ಕರುಣ್ ಕಾಳಯ್ಯ