ಮಡಿಕೇರಿ, ಫೆ. 27: ಬೆಂಗಳೂರಿನ ಗಾಂಧಿ ಭವನದಲ್ಲಿ ಸಿಟಿಜನ್ ಲೇಬರ್ ವೆಲ್‍ಫೇರ್ ಅಂಡ್ ಯ್ಯಾಂಟಿ ಕರಪ್ಷನ್ ಕಮಿಟಿ ಸಂಸ್ಥೆಯ ಮೂರನೇ ವರ್ಷದ ವಾರ್ಷಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆಗೈದವರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಕೊಡಗಿನ ಸೋಮವಾರಪೇಟೆಯ ಸಂತ ಜೋಸೆಫರ ಪ್ರೌಢ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ರಿಶಾ.ಎಸ್.ಎ. ಇವಳಿಗೆ "ಭಾರತೀಯ ಚಿಲ್ಡ್ರನ್ಸ್ ಆರ್ಟ್ ಐಂಡ್ ಕಲ್ಚರಲ್ ಅಚ್ಯೂವರ್ ಅವಾರ್ಡ್" ನೀಡಿ ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷರು ಡಾ.ಹನೀಫ್, ನಿವೃತ್ತ ಐ ಎ ಎಸ್ ಅಧಿಕಾರಿ ಮೀರಾ ಸಿ ಸಕ್ಷೇನಾ, ಸಾಲು ಮರದ ತಿಮ್ಮಕ್ಕ, ನಿವೃತ್ತ ನ್ಯಾಯಾಧೀಶರಾದ ಸೋಮಶೇಖರ್, ಶಿವಕುಮಾರ್ ಮತ್ತಿತರರು ಗಣ್ಯರು ವೇದಿಕೆಯಲ್ಲಿದ್ದರು. ರಿಶಾ ಭರತಮಾತೆಯನ್ನ ಸ್ಮರಿಸುವ ನೃತ್ಯ ಪ್ರದರ್ಶನ ನೀಡುವ ಮೂಲಕ ಎಲ್ಲರ ಪ್ರಶಂಸನೆಗೆ ಪಾತ್ರಳಾಗಿದ್ದಾಳೆ. ಅವಳನ್ನು ಪ್ರೋತ್ಸಾಹಿಸಿ ಉತ್ತೇಜನ ನೀಡುತ್ತಾ ಬರುತ್ತಿರುವ ರಿಶಾಳ ತಂದೆ, ತಾಯಿ, ಆಸಿಫ್ ರುಬೀನಾ ಎಂ.ಎ. ಅವರನ್ನು ಕೂಡ ಅದೇ ವೇದಿಕೆಯಲ್ಲಿ ಸನ್ಮಾನಿಸಲಾಯಿತು.