*ಸಿದ್ದಾಪುರ ಫೆ. 27 : ಪ್ರತಿ ಮಳೆಗಾಲದಲ್ಲಿ ಹದಗೆಡುತ್ತಿದ್ದ ಅಬ್ಯಾಲ, ಚೆಟ್ಟಳ್ಳಿ ರಸ್ತೆಗೆ ಕಾಂಕ್ರಿಟಿಕರಣದ ಭಾಗ್ಯ ದೊರೆತ್ತಿದೆ. ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಂಕ್ರಿಟಿಕರಣಗೊಳ್ಳುತ್ತಿದ್ದು, ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಪ್ರತಿಬಾರಿ ಡಾಂಬರು ರಸ್ತೆ ಹದಗೆಡುತ್ತಿದ್ದ ಕಾರಣ ಶಾಶ್ವತ ಪರಿಹಾರವಾಗಿ ಕಾಂಕ್ರಿಟ್ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕರು ತಿಳಿಸಿದರು.
ರಸ್ತೆ ಅಭಿವೃದ್ಧಿಗಾಗಿ ಸತತ ಪ್ರಯತ್ನ ನಡೆಸಿದ್ದ ತಾ.ಪಂ ಸದಸ್ಯ ಬಲ್ಲಾರಂಡ ಮಣಿಉತ್ತಪ್ಪ, ಚೆಟ್ಟಳ್ಳಿ ಗ್ರಾ.ಪಂ ಸದಸ್ಯರುಗಳಾದ ಬಲ್ಲಾರಂಡ ಕಂಠಿಕಾರ್ಯಪ್ಪ, ಮೇರಿ ಅಂಬುದಾಸ್, ತಂಗಮ್ಮ, ಸೀತಮ್ಮ, ರವಿ, ಮಾಜಿ ಸದಸ್ಯ ಅಡಿಕರ ರವಿ, ಪ್ರಮುಖರಾದ ಪುದಿಮಂಡ ಲೋಕೇಶ್, ಮರ್ದಾಳು ಹರಿ, ನೂಜಿಬೈಲು ಜಗತ್, ಪೇರಿಯನ ಉದಯ, ಸಿದ್ದಿಕಲ್ಲು ಜಗತ್, ಅಕ್ಕಾರಿ ದಯಾನಂದ, ಅನಿಲ್ ಕುಮಾರ್, ಯುವ ಬಿಜೆಪಿ ಅಧ್ಯಕ್ಷ ಯದುಕುಮಾರ್ ಹಾಗೂ ಗ್ರಾಮಸ್ಥರು ಹಾಜರಿದ್ದರು. ಇದೇ ಸಂದರ್ಭ ಚೆಟ್ಟಳ್ಳಿ ವಿಭಾಗದ ಗ್ರಾಮೀಣ ರಸ್ತೆಯ ಅಭಿವೃದ್ಧಿ ಕಾರ್ಯಕ್ಕೂ ಚಾಲನೆ ನೀಡಲಾಯಿತು. ಈ ರಸ್ತೆಗಾಗಿ ರೂ.45 ಲಕ್ಷಗಳನ್ನು ವಿನಿಯೋಗಿಸಲಾಗುತ್ತಿದೆ.