ಮಡಿಕೇರಿ, ಫೆ. 26: ಮಡಿಕೇರಿಯ ಅತಿಥಿ ವೃಕ್ಷ ಶಿಕ್ಷಣ ಸಂಸ್ಥೆಯಲ್ಲಿ ನಡೆಸಲಾದ ಮೂರು ತಿಂಗಳ ಉಚಿತ ಹೊಟೇಲ್ ಮ್ಯಾನೇಜ್ಮೆಂಟ್ ತರಬೇತಿಯಲ್ಲಿ ಸುಂಟಿಕೊಪ್ಪ ಮತ್ತು ಪಾಲಿಬೆಟ್ಟದ ಸ್ವಸ್ಥ- ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದ 15 ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ.
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆ ಪಡೆದ ಈ ತರಬೇತಿಯಲ್ಲಿ ಉತ್ತಮ ತಾಂತ್ರಿಕ ಮತ್ತು ಪ್ರಾಯೋಗಿಕ ಶಿಕ್ಷಣವನ್ನು ಪಡೆಯುವುದರ ಜೊತೆಗೆ ಕೊಡಗಿನ ವಿವಿಧ ಸ್ಟಾರ್ ಹೊಟೇಲ್ ಮತ್ತು ರೆಸಾರ್ಟ್ಗಳಲ್ಲಿ 1 ತಿಂಗಳ ಇಂಟನ್ರ್ಶಿಪ್ ಕೂಡ ಪಡೆದಿದ್ದಾರೆ.
ತರಬೇತಿ ಪಡೆದಿರುವ 14 ವಿದ್ಯಾರ್ಥಿಗಳಲ್ಲಿ 5 ಮಂದಿಗೆ ತಾಜ್ ಮಡಿಕೇರಿ, ಕೂಗ್ರ್ವೈಲ್ಡ್ರೆರೆಸಾರ್ಟ್, ಬಚ್ರ್ವುಡ್ರಿಟ್ರೀಟ್ನಲ್ಲಿ ಉದ್ಯೋಗ ದೊರೆತು ತಮ್ಮ ಜೀವನವನ್ನು ರೂಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸ್ವಸ್ಥ ಸಂಸ್ಥೆಯ ನಿರ್ದೇಶಕಿ ಆರತಿ ಸೋಮಯ್ಯ ತಿಳಿಸಿದ್ದಾರೆ.
ಅತಿಥಿ ವೃಕ್ಷ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಶಾಲಿನಿ ಚಾಲ್ರ್ಸ್ ಈ ವಿಶೇಷ ತರಬೇತಿಯ ರೂವಾರಿಯಾಗಿದ್ದರು. ಅಧ್ಯಕ್ಷತೆಯನ್ನು ಮೈಸೂರಿನ ಆಹಾರ ಕರಕುಶಲ ಸಂಸ್ಥೆಯ ಪ್ರಾಂಶುಪಾಲ ಡಾ. ಕಣ್ಣಪ್ಪ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕೊಡಗು ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಬಿ. ರಾಘವೇಂದ್ರ, ಜಿಲ್ಲಾ ಉದ್ಯೋಗಾಧಿಕಾರಿ ಸಿ. ಜಗನ್ನಾಥ್ ಮೊದಲಾದವರು ಪಾಲ್ಗೊಂಡಿದ್ದರು.