ಮಡಿಕೇರಿ,ಫೆ. 26: ಕೊಡಗು ಜಿಲ್ಲಾ ಸಹಕಾರ ಒಕ್ಕೂಟದಿಂದ ಇಂದು ಜಿಲ್ಲೆಯ ವ್ಯವಸಾಯ ಸೇವಾ ಸಹಕಾರ ಸಂಘಗಳು, ದವಸಭಂಡಾರ ಗಳು,ಇತರ ಪತ್ತಿನ ಬ್ಯಾಂಕ್‍ಗಳ ಉದ್ಯೋಗಿಗಳು ಹಾಗೂ ಸಹಕಾರ ಪ್ರತಿನಿಧಿಗಳಿಗೆ ಶಿಕ್ಷಣ ಕಾರ್ಯಗಾರ ನಡೆಯಿತು.
ಒಕ್ಕೂಟದ ಅಧ್ಯಕ್ಷ ಮನು ಮತ್ತಪ್ಪ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಒಕ್ಕೂಟದ ಇತರ ನಿರ್ದೇಶಕರು ಹಾಗೂ ತಜ್ಞರು ಸಹಕಾರ ಸಂಸ್ಥೆಗಳ ನಿರ್ವಹಣೆ, ಬಡ್ಡಿ ಮನ್ನಾ ಯೋಜನೆ ಹಾಗೂ ಚುನಾವಣಾ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು.