ದ್ವಿತೀಯ ಸ್ಥಾನ ಪಡೆದ ಸ್ಟ್ರೈಕ್ ಫೋರ್ಸ್
ಚೆಟ್ಟಳ್ಳಿ, ಫೆ. 27: ಬರಡಿ ಗ್ರಾಮದ ಕ್ರಿಯೇಟಿವ್ ಕಾರ್ನರ್ ಸಂಘದ ವತಿಯಿಂದ ಎರಡನೆ ವರ್ಷದ ಹೊನಲು ಬೆಳಕಿನ ಪ್ರೊ. ಲೀಗ್ ಮಾದರಿಯ ಮ್ಯಾಟ್ ಕಬಡ್ಡಿಯ ಅಂತಿಮ ಪಂದ್ಯಾಟದಲ್ಲಿ ಬ್ರದರ್ಸ್ ತಂಡ ಗೆಲುವಿನ ಮೂಲಕ ಬರಡಿ ಲೀಗ್ ಕಬಡ್ಡಿ ಕಪ್‍ನ್ನು ತನ್ನದಾಗಿಸಿಕೊಂಡಿತು.
ಸ್ಟೈಕ್ ಫೋರ್ಸ್ ತಂಡ ದ್ವಿತೀಯ ಸ್ಥಾನ ಹಾಗೂ ನೆಲ್ಲಿಹುದಿಕೇರಿಯ ರಾಂಭೊ ಈಗಲ್ ತಂಡ ತೃತೀಯ ಸ್ಥಾನ ಪಡೆದುಕೊಂಡಿತು. ಬೆಸ್ಟ್ ರೈಡರ್ ಸ್ಟೈಕ್ ಫೋರ್ಸ್ ತಂಡದ ಶರತ್, ಬೆಸ್ಟ್ ಡಿಫೆನ್ಡರ್ ಟೀಮ್ ಬ್ರದರ್ಸ್ ತಂಡದ ಶಾಫಿ, ಬೆಸ್ಟ್ ಆಲ್ರೌಂಡರ್ ನೆಲ್ಯಹುದಿಕೇರಿಯ ರಾಂಭೊ ಈಗಲ್ ತಂಡದ ರಹ್ಮಾನ್ ಹಾಗೂ ಬೆಸ್ಟ್ ಟೀಮ್ ಕ್ಲಬ್ ವೈ.ಬಿ.ಸಿ ತಂಡದ ಸಮಾಧಾನಕರ ಪ್ರಶಸ್ತಿ ಪಡೆದುಕೊಂಡಿತು.
ಕಬಡ್ಡಿ ಪಂದ್ಯಾವಳಿಯಲ್ಲಿ ನೆಲ್ಲಿಹುದಿಕೇರಿ ಗ್ರಾಮ ವ್ಯಾಪ್ತಿಯ ರಿಯಲ್ ಫೈಟರ್ಸ್, ಬ್ರದರ್ಸ್, ಸ್ಟ್ರೈಕ್ ಫೋರ್ಸ್, ಕ್ಲಬ್ ವೈಬಿಸಿ, ರ್ಯಾಂಬೋ ಡ್ರಾಗನ್, ಎಂಜಿಸಿ, ರ್ಯಾಂಬೋ ಈಗಲ್, ಬ್ಲ್ಯಾಕ್ ವೊರ್ಸೆಸ್ ತಂಡಗಳ ಆಟಗಾರರು ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
ರಾತ್ರಿಯಿಂದ ಬೆಳಗಿನ ಜಾವದವರೆಗೆ ನಡೆದ ಕಬಡ್ಡಿ ಪಂದ್ಯಾಟದ ವೀಕ್ಷಣೆಗೆ ಮಹಿಳೆಯರು. ಮಕ್ಕಳು, ಕ್ರೀಡಾಭಿಮಾನಿಗಳು ಪಾಲ್ಗೊಂಡಿದ್ದರು. ಸಮಾರೋಪ ಸಮಾರಂಭದಲ್ಲಿ ಸಾಧಕರಾದ ಶಿವಪ್ಪ ಹಾಗೂ ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಸದಸ್ಯ ಸಾಬು ವರ್ಗೀಸ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ಯೋಗೇಶ್, ಸಂಶೀರ್, ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಮೂಸ, ವಿ7 ಯುವಕ ಸಂಘದ ಸದಸ್ಯ ಜಾಫರ್, ಸಂತೋಷ್, ಅಯ್ಯ, ವರ್ತಕ ನಾಸಿರ್, ಸಂಘದ ಅಧ್ಯಕ್ಷ ವಿನು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದು ಬಹುಮಾನ ವಿತರಣೆ ಮಾಡಿದರು.