ಮಡಿಕೇರಿ, ಫೆ. 26: ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಮತ್ತು ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 29 ರಂದು ಗಾಳಿಬೀಡಿನ ನವೋದಯ ಸಭಾಂಗಣದಲ್ಲಿ ಜಿಲ್ಲೆಯ ಉದಯೋನ್ಮುಖ ಲೇಖಕರಿಗೆ ರಾಜ್ಯದ ಖ್ಯಾತ ಬರಹಗಾರರು ಮತ್ತು ಉಪನ್ಯಾಸಕರಿಂದ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.

18 ವರ್ಷ ಮೇಲ್ಪಟ್ಟ ಜಿಲ್ಲೆಯ 50 ಮಂದಿ ಉದಯೋನ್ಮುಖ ಲೇಖಕರಿಗೆ ಕಾರ್ಯಾಗಾರದಲ್ಲಿ ಭಾಗವಹಿಸುವ ಅವಕಾಶವಿದೆ. ಮಾರ್ಚ್ 5 ರೊಳಗೆ ಭಾಗವಹಿಸಲಿಚ್ಚಿಸುವ ಶಿಬಿರಾರ್ಥಿಗಳು ತಮ್ಮ ಸಮ್ಮತಿಯನ್ನು ವಿಲ್ಫ್ರೆಡ್ ಕ್ರಾಸ್ತ, ಪ್ರಧಾನ ಕಾರ್ಯದರ್ಶಿ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಸಂತ ಮೈಕಲರ ಪ್ರೌಢಶಾಲೆ ಮಡಿಕೇರಿ ದೂ. 9448773078 ಇವರಿಗೆ ಕಳುಹಿಸಿಕೊಡಬೇಕಾಗಿ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ತಿಳಿಸಿದ್ದಾರೆ.