ಕೂಡಿಗೆ, ಫೆ. 27: ಮುಳ್ಳು ಸೋಗೆಯ ಬಸವೇಶ್ವರ ಬಡಾವಣೆ ಯಲ್ಲಿ ಬಯಲು ಬಸ ವೇಶ್ವರ ದೇವಾಲಯದಲ್ಲಿ ಬಯಲು ಬಸವೇಶ್ವರ ದೇವಸ್ಥಾನ ಸಮಿತಿಯ ವತಿಯಿಂದ ಶಿವರಾತ್ರಿ ಹಬ್ಬದ ಅಂಗವಾಗಿ ಶಿವರಾತ್ರಿ ಉತ್ಸವ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ನಿವೃತ್ತ ಉಪನ್ಯಾಸಕ ಬಿ.ಆರ್. ನಾರಾಯಣ ಮಾತನಾಡಿ, ಶಿವರಾತ್ರಿ ಉತ್ಸವಗಳು ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವುದರೊಂದಿಗೆ ಪೌರಾಣಿಕ ವಿಚಾರಗಳನ್ನು ತಿಳಿಸುವ ಮೂಲಕ ಉತ್ತಮ ಸಂಸ್ಕಾರ, ಧಾರ್ಮಿಕ ಆಚಾರ-ವಿಚಾರಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತವೆ ಎಂದರು.
ಮುಖ್ಯ ಅತಿಥಿ ಶಿಕ್ಷಕ ಟಿ.ಜಿ. ಪ್ರೇಮ್ಕುಮಾರ್, ಈ ಬಡಾವಣೆಯಲ್ಲಿ ಶಿವರಾತ್ರಿ ಮತ್ತಿತರ ಆಚರಣೆಗಳ ಮೂಲಕ ಎಲ್ಲರೂ ಪರಸ್ಪರ ಪ್ರೀತಿ ವಿಶ್ವಾಸ ಹಾಗೂ ಸಹಬಾಳ್ವೆಯಿಂದ ಒಂದಾಗಿ ಜೀವನ ನಡೆಸುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ. ಇಂತಹ ಉತ್ಸವಗಳು ಜನರಲ್ಲಿ ಭಾವೈಕ್ಯತೆ ಪ್ರತಿಬಿಂಬಿಸುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಿಕ್ಷಕ ಬಿ.ಕೆ. ಸುದೀಪ್ ಮಾತನಾಡಿದರು. ಈ ಸಂದರ್ಭ ಸಮಿತಿಯ ಕಾರ್ಯದರ್ಶಿ ಬಿ.ಕೆ. ರವಿಕುಮಾರ್, ಸಮಿತಿ ಸದಸ್ಯ ಪಿ.ಸಿ. ಪೂಣಚ್ಚ, ಎಂ.ಎನ್. ಮೊಣ್ಣಪ್ಪ, ಪಿ.ಕೆ. ಲಕ್ಷ್ಮಣ, ಸತೀಶ್, ಲೋಕೇಶ್, ಸುರೇಶ್, ರಮೇಶ್, ದಿನೇಶ್, ಶಿವಾಜಿ ಮತ್ತಿತರರು ಇದ್ದರು.
ಸಾಂಸ್ಕøತಿಕ ಉತ್ಸವದಲ್ಲಿ ವಿವಿಧ ಸಾಂಸ್ಕøತಿಕ, ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.