ಕುಶಾಲನಗರ, ಫೆ. 27: ಟಿಬೇಟಿಯನ್ನರ ನೂತನ ವರ್ಷ ಲೋಸಾರ್ ಅನ್ನು ಬೈಲುಕೊಪ್ಪದ ಟಿಬೇಟಿಯನ್ ನಾಗರಿಕರು ವಿವಿಧ ಕಾರ್ಯಕ್ರಮಗಳೊಂದಿಗೆ ಬರಮಾಡಿಕೊಂಡರು.
ಬೈಲುಕೊಪ್ಪೆಯ ಹಳೆಯ ಅರಮನೆ, ತಶಿಲುಂಪು ಶಿಬಿರಗಳಲ್ಲಿ ಸಾಂಪ್ರದಾಯಿಕವಾಗಿ ನೂತನ ವರ್ಷವನ್ನು ಆಚರಿಸಿದರು. ಸರಳ ಸಮಾರಂಭ ಏರ್ಪಡಿಸುವುದರೊಂದಿಗೆ ಟಿಬೇಟಿಯನ್ ನೃತ್ಯ ಮತ್ತಿತರ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಟಿಬೇಟಿಯನ್ನರು ನೂತನ ವರ್ಷವನ್ನು 15 ದಿನಗಳ ಕಾಲ ಆಚರಿಸುತ್ತಾರೆ. ಈ ಸಂದರ್ಭ ವಿಶ್ವದ ಮೂಲೆಮೂಲೆಯಿಂದ ಟಿಬೇಟಿಯನ್ ಕುಟುಂಬ ಸದಸ್ಯರು ಆಗಮಿಸುವುದು ವಾಡಿಕೆ. ಈ ಬಾರಿ ಮಾತ್ರ ಕೊರೋನಾ ವೈರಸ್ನಿಂದ ನೂತನ ವರ್ಷಾಚರಣೆ ಬಹುತೇಕ ಕಳೆಗುಂದಿದ್ದು ಹಾಂಕಾಂಗ್, ಟಿಬೇಟ್, ಸಿಂಗಾಪುರ ಮತ್ತಿತರ ದೇಶಗಳಿಂದ ತಮ್ಮ ಸಂಬಂಧಿಕರು, ವಿದೇಶಿಯರು ಬೈಲುಕೊಪ್ಪೆಗೆ ಭೇಟಿ ನೀಡಲು ಅನಾನುಕೂಲ ಉಂಟಾಗಿದ್ದು ಆತಂಕದ ನಡುವೆ ವರ್ಷಾಚರಣೆ ಮುಂದುವರೆದಿದೆ.