ಕುಶಾಲನಗರ, ಫೆ. 27: ಗುಜರಾತ್‍ನಿಂದ ನಡಿಗೆ ಮೂಲಕ ಜಿಲ್ಲೆಗೆ ಆಗಮಿಸಿದ ಜೈನಮುನಿಗಳ ತಂಡವನ್ನು ಕುಶಾಲನಗರ ರಾಜಸ್ಥಾನ ಸಮಾಜ ಮತ್ತು ಜೈನ ಸಮುದಾಯದ ಪ್ರಮುಖರು ಕೊಪ್ಪ ಗೇಟ್ ಬಳಿ ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು.
ಸುಂಟಿ ಕೊಪ್ಪದ ಮಾದಾಪುರ ಬಳಿ ನಿರ್ಮಾಣಗೊಳ್ಳುತ್ತಿರುವ ಬೃಹತ್ ಜೈನ್ ಮಂದಿರದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಗಮಿಸಿದ ಜೈನ್ ಮುನಿಗಳಾದ ನಯನಚಂದ್ರ ಸಾಗರ ಸೂರಿ, ಅಜಿತ್ ಚಂದ್ರಸಾಗರ ಸೂರಿ ಸೇರಿದಂತೆ 20ಕ್ಕೂ ಅಧಿಕ ಮುನಿವರ್ಯರನ್ನು ಬರಮಾಡಿಕೊಳ್ಳಲಾಯಿತು.
ಸುಂಟಿಕೊಪ್ಪ ಬಳಿ ಸೂರತ್ ಮೂಲದ ಕಾಫಿ ಬೆಳೆಗಾರರೊಬ್ಬರು ಸ್ಥಳ ದಾನ ನೀಡಿದ್ದು ಈ ಪ್ರದೇಶದಲ್ಲಿ ಜೈನ ಮಂದಿರ ನಿರ್ಮಾಣಕ್ಕೆ ಮಾರ್ಚ್ 1 ರಂದು ಶಿಲಾನ್ಯಾಸ ನೆರವೇರಲಿದೆ.
ಈ ಸಂದರ್ಭ ರಾಜಸ್ಥಾನ ಮತ್ತು ಜೈನ ಸಮುದಾಯದ ಕುಶಾಲನಗರ ಪ್ರಮುಖರಾದ ಅಶೋಕ್ ಕುಮಾರ್ ರಾವಲ್, ಶಾಂತಿಲಾಲ್ ಜೈನ್, ಕೈಲಾಶ್ ಚಂದ್ ಜೈನ್, ಗೌತಮ್ ಚಂದ್ ಜೈನ್, ಲಕ್ಷ್ಮಿಕಾಂತ್ ಜೈನ್, ಮಹೇಂದ್ರಕುಮಾರ್ ಶರ್ಮ, ಪ್ರವೀಣ್ ಜೈನ್ ಮತ್ತಿತರರು ಮುನಿಗಳನ್ನು ಮಾಡಿಕೊಂಡರು.