ಶನಿವಾರಸಂತೆ, ಫೆ. 26: ಕೇಂದ್ರೀಯ ಅಂಚೆ ಇಲಾಖೆ, ಸೋಮವಾರಪೇಟೆ ಅಂಚೆ ಸನ್ ಡಿವಿಜನ್ ಹಾಗೂ ಶನಿವಾರಸಂತೆ ಅಂಚೆ ಕಚೇರಿ ಸಹಭಾಗಿತ್ವದಲ್ಲಿ ಸಾರ್ವಜನಿಕರಿಗಾಗಿ ಆಧಾರ್ ಶಿಬಿರ ಮತ್ತು ಅಂಚೆ ಮೇಳವನ್ನು ನಡೆಸಲಾಯಿತು.
ಈ ಶಿಬಿರ ಮತ್ತು ಮೇಳದಲ್ಲಿ ಆಧಾರ್ ಕಾರ್ಡ್‍ನಲ್ಲಿ ಹೊಸ ದಾಖಲಾತಿ, ನವೀಕರಣ ಜತೆಗೆ ಮೊಬೈಲ್ ಸಂಖ್ಯೆ ತಿದ್ದುಪಡಿ, ವಿಳಾಸ ಬದಲಾವಣೆ, ನವೀಕರಣ, ಹೆಸರು, ಜನ್ಮದಿನಾಂಕ ತಿದ್ದುಪಡಿ, ಬಯೋಮೆಟ್ರಿಕ್ ನವೀಕರಣ ಮಾಡಿಕೊಡಲಾಯಿತು.
ಗ್ರಾಮೀಣ ಅಂಚೆ ಜೀವ ವಿಮೆ, ಐಪಿಪಿಬಿ ಖಾತೆ, ಎಸ್‍ಬಿ, ಆರ್‍ಡಿ, ಎಸ್‍ಎಸ್‍ಎ ಖಾತೆಯನ್ನು ತೆರೆಯಲಾಯಿತು. ಸಾರ್ವಜನಿಕರು ಮತ್ತು ಅಂಚೆ ಗ್ರಾಹಕರು ಶಿಬಿರ ಮತ್ತು ಮೇಳದಲ್ಲಿ ಪಾಲ್ಗೊಂಡು ಯೋಜನೆಯನ್ನು ಸದುಪಯೋಗಪಡಿಸಿಕೊಂಡರು. ಸೋಮವಾರಪೇಟೆ ಅಂಚೆ ಸಬ್ ಡಿವಿಜನಲ್ ಇನ್ಸ್‍ಪೆಕ್ಟರ್ ಬಿ.ಡಿ. ಮಂಜುನಾಥ್, ಇಲಾಖೆ ಅಧಿಕಾರಿಗಳಾದ ಬಿ.ಎಸ್. ಭಾಸ್ಕರ್, ಎಂ.ಬಿ. ರವೀಂದ್ರ, ಶನಿವಾರಸಂತೆ ಅಂಚೆ ಕಚೇರಿಯ ಎಸ್‍ಪಿಓ ಎಂ.ಎ. ಕಸ್ತೂರಿ, ಸಿಬ್ಬಂದಿ ಹೆಚ್.ಎನ್. ದೀಪಕ್, ಶರತ್, ವಿವಿಧೆಡೆಯ ಗ್ರಾಮೀಣ ಬಿಪಿಒ ಸಿಬ್ಬಂದಿ ಪಾಲ್ಗೊಂಡಿದ್ದರು.