ಕುಶಾಲನಗರ, ಫೆ. 26: ಕುಶಾಲನಗರದ ಕಲಾಸಾಗರ ಸಂಗೀತ ನೃತ್ಯ ನಾಟಕ ಅಕಾಡೆಮಿ ವತಿಯಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.

ಪಟ್ಟಣದ ಕಾರು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಮಟ್ಟದ ಗಾಯಕರಾದ ಮೊಹಮ್ಮದ್ ನಫೀಸ್, ಮಹಾರಾಷ್ಟ್ರದ ರಶ್ಮಿ ಲೆಹೆರಿ, ಸ್ಥಳೀಯ ಕಲಾವಿದರಾದ ಲಿಯಾಖತ್ ಅಲಿ ಖಾನ್, ಶಕೀಲ್ ಖಾಸ್ಮಿ, ಬೆಂಗಳೂರಿನ ಪ್ರಸಿದ್ಧ ಮಿಮಿಕ್ರಿ ಕಲಾವಿದ ಸನಾ ಸಾಗರ್ ಸೇರಿದಂತೆ ಸ್ಥಳೀಯ ಕಲಾವಿದರು ಹಳೆಯ ಹಾಡುಗಳನ್ನು ಹಾಡಿ ರಂಜಿಸಿದರು. ಇದೇ ಸಂದರ್ಭ ಸ್ಥಳೀಯ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮ ಆಯೋಜಕ ಅಕಾಡೆಮಿಯ ಜಿಲ್ಲಾ ಅಧ್ಯಕ್ಷ ಅಬ್ದುಲ್ ಹಫೀಜ್ ಸಾಗರ್, ಪ್ರಮುಖರಾದ ಕೆ.ಪಿ. ಚಂದ್ರಕಲಾ, ವಿ.ಪಿ. ಶಶಿಧರ್ ಮತ್ತಿತರರು ಇದ್ದರು.