ಮಡಿಕೇರಿ, ಫೆ. 27: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು 2019-20ನೇ ಕ್ರಿಯಾಯೋಜನೆಯಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿದ್ದು, ಆ ಯೋಜನೆ ಯಂತೆ ‘ಕೊಡಗಿನ ಶ್ರೀಮಂತ ಸಂಸ್ಕøತಿಯಲ್ಲಿ ಐನ್ಮನೆ’ ಎಂಬ ವಿಷಯದ ಕುರಿತು ಅಂತರ್ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಮಾ. 21 ರಂದು ಆಯೋಜಿಸಲಾಗಿದೆ.
ಆಸಕ್ತರು ‘ಕೊಡಗಿನ ಶ್ರೀಮಂತ ಸಂಸ್ಕøತಿಯಲ್ಲಿ ಐನ್ಮನೆ’ಯ ವಿಷಯದ ಕುರಿತು ಸಂಕ್ಷಿಪ್ತವಾಗಿ 200 ಅಕ್ಷರದ ಒಳಗೆ ಕೊಡವ, ಕನ್ನಡ, ಇಂಗ್ಲಿಷ್ ಈ 3 ಭಾಷೆಯಲ್ಲಿ ಯಾವುದಾದರೂ ಒಂದು ಭಾಷೆಯಲ್ಲಿ ಬರೆದು ಮಾ. 10ರ ಒಳಗೆ ಮತ್ತು ಪೂರ್ಣ ಪತ್ರಿಕೆಯನ್ನು ಮಾ. 21ರ ಒಳಗೆ ಅಕಾಡೆಮಿ ಕಚೇರಿಗೆ ಅಥವಾ ಇ-ಮೇಲ್ ಮುಖಾಂತರ ಚಿiಟಿmಚಿಟಿe2020 @gmಚಿiಟ.ಛಿomಗೆ ಕಳುಹಿಸಿಕೊಡಲು ಕೋರಿದೆ.
ಆಯ್ದ ಪತ್ರಿಕೆಗಳಿಗೆ ಮಾ. 21 ರಂದು ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ನಡೆಯುವ ‘ಅಂತರ್ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ’ ಕಾರ್ಯಕ್ರಮದಲ್ಲಿ ವಿಚಾರ ಮಂಡನೆ ಮಾಡಲು ಅವಕಾಶ ಇರುತ್ತದೆ ಹಾಗೂ ಪ್ರಕಟಿಸಲಾಗುವುದು.
ಹೆಚ್ಚಿನ ವಿವರಗಳಿಗಾಗಿ ಈ ಮೊಬೈಲ್ ಸಂಖ್ಯೆ 9480440246, 9880216291 ಸಂಪರ್ಕಿಸುವಂತೆ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ತಿಳಿಸಿದ್ದಾರೆ.