ಸುಂಟಿಕೊಪ್ಪ, ಫೆ. 27: ಕೊಡಗು ಜಿಲ್ಲಾ ರೋಮನ್ ಕ್ಯಾಥೊಲಿಕ್ ಸಂಘದ ನೂತನ ಸಾಲಿನ ಅಧ್ಯಕ್ಷರಾಗಿ ಅಬ್ಬೂರುಕಟ್ಟೆಯ ಎಸ್.ಎಂ. ಡಿಸಿಲ್ವಾ, ಪ್ರಧಾನ ಕಾರ್ಯದರ್ಶಿಯಾಗಿ ಸುಂಟಿಕೊಪ್ಪದ ಪಿ.ಎಫ್. ಸಬಾಸ್ಟೀನ್, ಅವರುಗಳನ್ನು ಅವಿರೋಧವಾಗಿ ನೇಮಕ ಗೊಳಿಸಲಾಯಿತು.

ಸುಂಟಿಕೊಪ್ಪ ಸಂತ ಅಂತೋಣಿ ಶಾಲಾ ಸಭಾಂಗಣ ದಲ್ಲಿ ಸ್ಥಾಪಕ ಅಧ್ಯಕ್ಷರಾದ ವಿ.ಎ. ಲಾರೆನ್ಸ್ ಅಧ್ಯಕ್ಷತೆಯಲ್ಲಿ ನಡೆದ ರೋಮನ್ ಕ್ಯಾಥೊಲಿಕ್ ಸಂಘದ ಸಭೆಯಲ್ಲಿ 2020-21ನೇ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಂಘದ ಜಿಲ್ಲಾ ಸಂಚಾಲಕರಾಗಿ ಕ್ಲಾಡಿಯಸ್ ಲೋಬೋ, ಉಪಾಧ್ಯಕ್ಷರುಗಳಾಗಿ ಮಡಿಕೇರಿಯ ಜಾನ್ಸನ್ ಪಿಂಠೋ, ಜೋಕಿಂವಾಸ್ ಸೋಮವಾರಪೇಟೆ, ಸಿದ್ದಾಪುರದ ಪಿ.ವಿ. ಜಾನ್ಸ್‍ನ್, ಸಹ ಕಾರ್ಯದರ್ಶಿಯಾಗಿ ಪ್ಯಾಟ್ರಿಕ್ ಕುಶಾಲನಗರ, ಡೆನ್ನಿ ಬೋರಾಸ್ ಚೆಟ್ಟಳ್ಳಿ, ವಿನ್ಸಿ ಡಿಸೋಜ ಸೋಮವಾರಪೇಟೆ, ಖಜಾಂಚಿಯಾಗಿ ಐ.ಡಿ. ರಾಯ್ ಕುಶಾಲನಗರ, ಸಂಘಟನಾ ಕಾರ್ಯದಶಿಗಳಾಗಿ ಬ್ಲೇಸಿ ಕ್ರಾಸ್ತಾ ಕುಶಾಲನಗರ, ಮಾರ್ವಿನ್ ಲೋಬೋ ವೀರಾಜಪೇಟೆ, ಜೇಕಬ್ ಮಡಿಕೇರಿ, ಕ್ರೀಡಾ ಕಾರ್ಯದರ್ಶಿಯಾಗಿ ಅಂತೋಣಿ ಡಿಸೋಜ, ಸಾಂಸ್ಕøತಿಕ ಕಾರ್ಯದರ್ಶಿಗಳಾಗಿ ಸುಂಟಿಕೊಪ್ಪದ ರೋಸ್‍ಮೇರಿ ರಾಡ್ರಿಗಸ್, ಪಿಲೋಮಿನಾ ಜಾರ್ಜ್ ಕೂಡಿಗೆ, ಗ್ರೇಸಿ ಡೇವಿಡ್ ಸುಂಟಿಕೊಪ್ಪ, ಸಲಹೆಗಾರರಾಗಿ ಫಿಲಿಪ್‍ವಾಸ್, ಗೌರವಾಧ್ಯಕ್ಷರಾಗಿ ಸ್ಥಾಪಕ ಅಧ್ಯಕ್ಷ ಲಾರೆನ್ಸ್ ಸೋಮವಾರಪೇಟೆ, ಕ್ರೀಡಾಕೂಟ ಆಯೋಜನಾ ಸಮಿತಿಗೆ ಅಬ್ಬೂರುಕಟ್ಟೆಯ ರಾಯನ್ ಫರ್ನಾಂಡಿಸ್, ಆರ್.ವಿ. ಸಂದೀಪ್, ಸಾಲ್ವಿನ್ ಡಿಸೋಜ್ ಹಾಗೂ ಮಾಧ್ಯಮ ಪ್ರತಿನಿಧಿಯಾಗಿ ಎಂ.ಬಿ. ವಿನ್ಸೆಂಟ್ ಇವರುಗಳನ್ನು ನೇಮಕಗೊಳಿಸಲಾಯಿತು.