ನಾಪೆÇೀಕ್ಲು, ಫೆ. 27: ನಾಪೆÇೀಕ್ಲುವಿನಲ್ಲಿ ಬಾಳೆಯಡ ದಿವ್ಯಾ ಮಂದಪ್ಪ ಅವರು ವಿಶೇಷಚೇತನ ಮಕ್ಕಳ ಪಾಲನೆಯ ಆರಂಭಿಸಿದ ಪುನಶ್ಚೇತನ ಸಂಸ್ಥೆಯ ಎರಡನೇ ವಾರ್ಷಿಕೋತ್ಸವ ಸಮಾರಂಭ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಪೆÇೀಕ್ಲು ಗ್ರಾಮ ಪಂಚಾಯಿತಿ ಸದಸ್ಯೆ ಸುಶೀಲಮ್ಮ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರಿನ ವಿಂದ್ಯಾ ಸಂಸ್ಥೆಯ ಹೆಚ್.ಆರ್. ಪಟ್ಟಡ ಹರಿ ನಾಣಯ್ಯ ವಿಶೇಷಚೇತನ ಮಕ್ಕಳು ಯಾವದರಲ್ಲಿಯೂ ಹಿಂದುಳಿದಿಲ್ಲ. ವಿಂದ್ಯಾ ಸಂಸ್ಥೆ ಬೆಂಗಳೂರಿನಲ್ಲಿ ಸುಮಾರು 600 ಮಕ್ಕಳಿಗೆ ವಿಶೇಷ ತರಬೇತಿ ಕೊಟ್ಟು ಉದ್ಯೋಗ ನೀಡಿದೆ. ಹಾಗೆಯೇ ಕೊಡಗಿನ ವಿಶೇಷ ಮಕ್ಕಳು ತಮ್ಮ ಕಾಲ ಮೇಲೆ ತಾವೇ ನಿಲ್ಲಬೇಕೆನ್ನುವದು ಆಶಯವಾಗಿದೆ ಎಂದರು.
ರಿಬಿಲ್ಡ್ ಕೊಡಗು ಸಂಸ್ಥೆಯ ಕೇಳಪಂಡ ಕುಶಾಲಪ್ಪ ಮಾತನಾಡಿ, ಕೊಡಗಿನಲ್ಲಿ ಯಾವದೇ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗದಿದ್ದರೆ ನಮ್ಮ ಸಂಸ್ಥೆ ಸದಾ ಸಿದ್ಧವಾಗಿದೆ. ಅದಕ್ಕಾಗಿ ನನ್ನನ್ನು ಸಂಪರ್ಕಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಮ್ಯಾನೇಜಿಂಗ್ ಟ್ರಸ್ಟಿ ಬೊಪ್ಪಂಡ ಸೂರಜ್ ಗಣಪತಿ ಮಾತನಾಡಿದರು. ಪುನಶ್ಚೇತನ ಸಂಸ್ಥೆಯ ಅಧ್ಯಕ್ಷೆ ಬಾಳೆಯಡ ದಿವ್ಯಾ ಮಂದಪ್ಪ ಸ್ವಾಗತಿಸಿ, ಶಿಕ್ಷಕಿ ಅಸ್ಮಾ ನಿರೂಪಿಸಿ, ಸಹ ಶಿಕ್ಷಕಿ ಬೊಪ್ಪಂಡ ಪ್ರೀತಿ ವಂದಿಸಿದರು. ನಂತರ ವಿಶೇಷಚೇತನ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.