ಮಡಿಕೇರಿ, ಫೆ. 27: ಇನ್‍ಫೋಸಿಸ್ ವತಿಯಿಂದ ನಡೆದ ಕ್ಯಾಂಪಸ್ ಸೆಲೆಕ್ಷನ್‍ನಲ್ಲಿ ಮೂರ್ನಾಡು ವಿದ್ಯಾಸಂಸ್ಥೆಯ ಪದವಿ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿನಿ ಗೌರಮ್ಮ ಪಿ.ಕೆ. ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ತಿಳಿಸಿದ್ದಾರೆ.

ಮೂರ್ನಾಡಿನ ಪದವಿ ಕಾಲೇಜಿನಲ್ಲಿ ಬೆಂಗಳೂರಿನ ನಂದಿ ಟೊಯೋಟಾ ಕಂಪೆನಿಯವರು ಅಂತಿಮ ಬಿ ಕಾಂ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸೆಲೆಕ್ಷನ್ ಆಯೋಜಿಸಿ ದ್ದರು, ಇದರಲ್ಲಿ ಪದವಿ ಕಾಲೇಜಿನ ಬಿಕಾಂ ವಿದ್ಯಾರ್ಥಿಗಳು ಭಾಗವಹಿ ಸಿದ್ದರು.ಕಾಲೇಜಿನ 10 ವಿದ್ಯಾರ್ಥಿಗಳು ಅಂತಿಮ ಸಂದರ್ಶನದಲ್ಲಿ ಆಯ್ಕೆಯಾದರು.

ಅಂತಿಮ ಬಿಕಾಂನ ವಿದ್ಯಾರ್ಥಿಗಳಾದ ಸಚಿನ್, ಅಯ್ಯಣ್ಣ, ಕರೀಂ, ಅಬ್ದುಲ್ ನಾಫಿ, ಅಬ್ದುಲ್ ರಹುಫ್, ಮೊಹಮ್ಮದ್ ಉವೈಸುದ್ದಿನ್, ಭವನ್, ಮಸೂದ್, ದೀಪಿಕಾ ಮುತ್ತಮ್ಮ ಹಾಗೂ ತಶ್ರಿನಾ ಆಯ್ಕೆಯಾಗಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.