ನಾಪೋಕ್ಲು, ಫೆ. 27: ನಂ. 96ನೇ ಕುಂಜಿಲ ವಿವಿದ್ಧೋದ್ದೇಶ ಸಹಕಾರ ಧವಸಭಂಡಾರ ನಿಯಮಿತದ ಅಧ್ಯಕ್ಷರಾಗಿ ಕಲ್ಯಾಟಂಡ ರಘು ತಮ್ಮಯ್ಯ ಆಯ್ಕೆಯಾಗಿದ್ದಾರೆ. ಸಂಘದ ಆಡಳಿತ ಮಂಡಳಿಯ ಮುಂದಿನ ಐದು ವರ್ಷದ ಅವಧಿಗೆ ಅಧ್ಯಕ್ಷರಾಗಿ ಮೂರನೇ ಬಾರಿಗೆ ಅವಿರೋಧವಾಗಿ ಅವರು ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಪಯಡತ್ ಎಂ. ಆಲಿ ಹಾಗೂ ನಿರ್ದೇಶಕರಾಗಿ ಕಲಿಯಂಡ ಡಿ. ಅಪ್ಪಣ್ಣ, ಪದಾರ್ಥಿ ವಿ. ಕೃಷ್ಣಯ್ಯ, ಕಣಿಯರ ನಾಣಯ್ಯ, ಕಂಬೇಯಂಡ ಸಿ. ಪಳಂಗಪ್ಪ, ಪೇರಿಯಂಡ ಎಂ. ಶೋಭಾ, ನಂಬುಡಮಂಡ ಎಂ. ಸುಬ್ರಮಣಿ, ಕಲಿಯಂಡ ಎ. ಕಾಳಪ್ಪ, ಕೈಬುಲಿರ ಎ. ಅಯ್ಯಪ್ಪ ಹಾಗೂ ಐಕೋಳಂಡ ಡಾಟಿ ಅಯ್ಯಪ್ಪ ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿಯಾಗಿ ಎಂ.ಜಿ. ಸುನಿತ ಹಾಗೂ ಕಾರ್ಯದರ್ಶಿ ಕೆ.ಎಂ. ಕುಂಞಪ್ಪ ಉಪಸ್ಥಿತರಿದ್ದರು.