ಮಡಿಕೇರಿ, ಫೆ. 27 : ವಿಶ್ವ ಶ್ರವಣ ದಿನದ ಅಂಗವಾಗಿ ನಗರದ ಅಮೃತ ಇಎನ್ಟಿ ಮತ್ತು ವರ್ಟಿಗೊ ಕೇರ್ ಕ್ಲಿನಿಕ್ನಲ್ಲಿ, ಕಾವೇರಿ ಹಿಯರಿಂಗ್ ಕ್ಲಿನಿಕ್ ಮತ್ತು ಪೆÇೀನಾಕ್ ಹಿಯರಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಹಯೋಗದಲ್ಲಿ ಮಾ.3 ರಂದು ಶ್ರವಣ ಯಂತ್ರ ಬದಲಾವಣೆ ಹಾಗೂ ಉಚಿತ ಶ್ರವಣ ಪರೀಕ್ಷೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಇಎನ್ಟಿ ತಜ್ಞ ಡಾ.ಮೋಹನ್ ಅಪ್ಪಾಜಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 3 ರಂದು ಬೆಳಗ್ಗೆ 8.30 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ರಾಜಾಸೀಟ್ ರಸ್ತೆಯಲ್ಲಿರುವ ಅಮೃತ ಇ.ಎನ್.ಟಿ. ಮತ್ತು ವರ್ಟಿಗೋ ಕ್ಲಿನಿಕ್ನಲ್ಲಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಹೆಸರು ನೋಂದಣಿಗೆ ಮೊ.8792874030, 08272-221460 ಸಂಪರ್ಕಿಸಬಹು ದೆಂದರು.
ಶಿಬಿರ ಉದ್ಘಾಟನೆಯ ಸಂದರ್ಭ ಡಿಹೆಚ್ಒ ಡಾ. ಮೋಹನ್, ಡಾ. ಶ್ಯಾಂ ಅಪ್ಪಣ್ಣ, ಡಾ. ಜಿ.ಕೆ. ಭಟ್, ಮಡಿಕೇರಿಯ ಹಿರಿಯ ಇಎನ್ಟಿ ತಜ್ಞ ವೈದ್ಯರಾದ ಡಾ.ದೇವಯ್ಯ, ಮಕ್ಕಳ ತಜ್ಞ ಡಾ. ನವೀನ್ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ಶ್ರವಣ ದೋಷ ಯಾರಿಗಾದರೂ, ಯಾವುದೇ ವಯಸ್ಸಿನಲ್ಲಿಯೂ ಕಂಡುಬರಬಹುದು. ಹೀಗಿದ್ದೂ ಇದನ್ನು ಒಮ್ಮೆಲೆ ಗುರುತಿಸಲು ಸಾಧ್ಯವಾಗಲಾರದು.ಹೆಚ್ಚಾಗಿ ವಯಸ್ಕರಲ್ಲಿ ಶ್ರವಣ ದೋಷವಿದ್ದಲ್ಲಿ ಮಾತನಾಡುವಾಗ ಅರ್ಥ ಮಾಡಿ ಕೊಳ್ಳುವಲ್ಲಿ ತೊಂದರೆಗಳು ಕಾಣಿಸಿಕೊಳ್ಳಬಹುದು, ಟಿವಿ ಅಥವಾ ಮೊಬೈಲ್ ಶಬ್ದವನ್ನು ಅವರು ಮಿತಿಗಿಂತಲೂ ಹೆಚ್ಚಿಸಬಹುದು, ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗಿನ ಸಂವಹನ ಕಡಿಮೆಯಾಗಬಹುದು, ಇತರರ ಸ್ಪಷ್ಟವಾಗಿ ಅರ್ಥವಾಗದ ಕಾರಣ ದುಃಖ ಅಥವಾ ಖಿನ್ನತೆ ಉಂಟಾಗಬಹುದೆಂದು ತಿಳಿಸಿದರು.
ಶ್ರವಣದೋಷವುಳ್ಳ ಮಕ್ಕಳಲ್ಲಿ ಭಾಷಾ ಕಲಿಕೆಯಲ್ಲಿನ ಅಸಮರ್ಥತೆ ಕಾಣಬಹುದು, ಶಾಲೆಯಲ್ಲಿ ವಿಷಯಗಳನ್ನು ಕಲಿಯುವಲ್ಲಿ ತೊಂದರೆ ಮತ್ತು ಅವರ ಸಾಮಥ್ರ್ಯಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ವಿವರ ಗಳನ್ನಿತ್ತರು. ಶ್ರವಣ ದೋಷವನ್ನು ಸೂಕ್ತ ಸಮಯ ಹಾಗೂ ಸಮರ್ಪಕ ಚಿಕಿತ್ಸೆಯ ಮೂಲಕ ಬಗೆಹರಿಸಿ ಕೊಳ್ಳಲು ಸಾಧ್ಯವಿದೆ. ಶ್ರವಣ ದೋಷವನ್ನು ಶ್ರವಣ ಸಾಧನಗಳ ಮೂಲಕ, ಕಾಕ್ಲಿಯರ್ ಇಂಪ್ಲಾಂಟ್ ಮಾಡಿಕೊಳ್ಳುವ ಮೂಲಕ ನಿವಾರಿಸಿ ಕೊಂಡು ಬದುಕನ್ನು ಯಶಸ್ವಿಯಾಗಿ ನಡೆಸಬಹುದೆಂದು ತಿಳಿಸಿದರು.
ಕಾವೇರಿ ಕ್ಲಿನಿಕ್ನ ಆಡಿಯಾಲಜಿಸ್ಟ್ ಡಾ.ಎಂ.ಎ.ಅಚ್ಚಯ್ಯ ಮಾತನಾಡಿ, ಎಳೆಯ ಮಕ್ಕಳಲ್ಲಿ ಶ್ರವಣ ದೋಷವಿದ್ದಲ್ಲಿ ಅಂತಹವರಿಗೆ ಮಾತು ಬರುವುದಿಲ್ಲವೆಂದು ತಿಳಿಸಿದ ಅವರು, ವಯಸ್ಕರು ಶ್ರವಣ ದೋಷಕ್ಕೆ ಒಳಗಾಗಿ ಚಿಕಿತ್ಸೆ ಪಡೆಯದಿದ್ದಲ್ಲಿ ನಿಧಾನವಾಗಿ ಸಾರ್ವಜನಿಕರ ಕಡೆಗಣನೆಗೆ ಒಳಗಾಗುವ ಮೂಲಕ ಖಿನ್ನತೆಗೆ ಒಳಗಾಗುವ ಅಪಾಯವಿದೆ. ಪ್ರಸ್ತುತ ಶ್ರವಣ ದೋಷದ ಬಗ್ಗೆ ಸರ್ಕಾರವೂ ಗಂಭೀರವಾಗಿದ್ದು, ಮಕ್ಕಳಲ್ಲಿನ ಶ್ರವಣ ದೋಷದ ಪತ್ತೆಗೆ ‘ನ್ಯೂ ಬಾರ್ನ್ ಸ್ಕ್ರೀನಿಂಗ್’ನ್ನು ಆಸ್ಪತ್ರೆ ಗಳಲ್ಲಿ ಅಳವಡಿಸಿರುವುದಾಗಿ ತಿಳಿಸಿದರು.