ನಾಪೆÇೀಕ್ಲು, ಫೆ. 25 : ನಾಪೆÇೀಕ್ಲು ನಗರ ಗ್ರಾಮ ಪಂಚಾಯಿತಿಯ ಕುಡಿಯುವ ನೀರಿನ ಶುದ್ಧೀಕರಣ ಘಟಕವನ್ನು ನೂತನವಾಗಿ ನಿರ್ಮಿಸಿ ನಾಗರೀಕರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರ ಪ್ರಯತ್ನದಿಂದ ಅನುದಾನ ಮಂಜೂರಾಗಿದೆ. ಮಂಜೂರಾದ ಸುಮಾರು 72 ಲಕ್ಷ ರೂ.ಗಳ ಶುದ್ಧ ಕುಡಿಯುವ ನೀರಿನ ಘಟಕದ ಯೋಜನೆಗೆ ಶಾಸಕರು ಭೂಮಿ ಪೂಜೆಯನ್ನು ನೆರವೇರಿಸಿದರು.

ನಂತರ ಮಾತನಾಡಿದ ಅವರು ರಾಜ್ಯ ಸರಕಾರವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಲಭೂತ ಅಭಿವೃದ್ಧಿಗಾಗಿ ಈಗಾಗಲೇ ಕೋಟ್ಯಾಂತರ ಹಣವನ್ನು ಬಿಡುಗಡೆಗೊಳಿಸಿದೆ ಎಂದ ಅವರು, ಅದರಂತೆ ಈ ವಿಭಾಗದ ಕಾಮಗಾರಿಯನ್ನು ಈಗಾಗಲೇ ಕೈಗೆತ್ತಿಕೊಳ್ಳಲಾಗಿದ್ದು ಕಾಮಗಾರಿಯು ಪ್ರಗತಿಯಲ್ಲಿದೆ ಎಂದರು.

ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯ ಪಾಡಿಯಮ್ಮಂಡ ಮುರುಳಿ ಕರುಂಬಮ್ಮಯ್ಯ ಈ ಭಾಗದ ಸಮಸ್ಯೆ ಬಗ್ಗೆ ಶಾಸಕರ ಗಮನಕ್ಕೆ ತಂದರು. ಕಾರ್ಯಕ್ರಮದಲ್ಲಿ ತಾಲೋಕು ಪಂಚಾಯತ್ ಅಧ್ಯಕ್ಷೆ ತೆಕ್ಕಡ ಶೋಭಾ ಮೋಹನ್, ಸದಸ್ಯರಾದ ಉಮಾಪ್ರಭು, ಇಂದಿರಾ ಹರೀಶ್, ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್. ಉಪಾಧ್ಯಕ್ಷ ಕಾಳೇಯಂಡ ಸಾಬ ತಿಮ್ಮಯ್ಯ, ಸದಸ್ಯ ಶಿವಚಾಳಿಯಂಡ ಜಗದೀಶ್, ಸುಶೀಲಮ್ಮ, ಬಿ.ಜೆ.ಪಿ.ಅಧ್ಯಕ್ಷ ಅಂಬಿ ಕಾರ್ಯಪ್ಪ, ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಪಾಡಿಯ ಮ್ಮಂಡ ಮನು ಮಹೇಶ್, ಕಂಗಾಂಡ ಜಾಲಿ ಪೂವಪ್ಪ, ಚೋಕಿರ ಸಜಿತ್, ಕೇಲೇಟಿರ ದೀಪು, ದೀವಾಕರ, ವಿನಯ್ ಮತ್ತಿತರರು ಇದ್ದರು.