ಸೋಮವಾರಪೇಟೆ, ಫೆ. 25: ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿರುವ ರೂ. 79 ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಭೂಮಿಪೂಜೆ ನೆರವೇರಿಸಿದರು.

ಗೋಣಿಮರೂರು ಗ್ರಾಮದ ಬಸವೇಶ್ವರ ದೇವಾಲಯ ಸಮೀಪ 14 ಕಾಮಗಾರಿಗಳಿಗೆ ಪೂಜೆ ನೆರವೇರಿಸಿದ ಶಾಸಕರು, ಯಡಿಯೂರಪ್ಪ ನೇತೃತ್ವದ ಬಿ.ಜೆ.ಪಿ. ರಾಜ್ಯ ಸರ್ಕಾರ ಕೊಡಗಿನ ಅಭಿವೃದ್ಧಿಗಾಗಿ 530 ಕೋಟಿ ರೂ. ಗಳ ವಿಶೇಷ ಪ್ಯಾಕೇಜ್ ಘೋಷಿಸಿದ್ದು ಈಗಾಗಲೇ 100 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದೆ. ಶೀಘ್ರವೇ ಮತ್ತೊಮ್ಮೆ 100 ಕೋಟಿ ರೂ. ಗಳನ್ನು ಬಿಡುಗಡೆಗೊಳಿಸಲಿದ್ದಾರೆ ಎಂದರು.

ಜಿಲ್ಲೆಯ ಎಲ್ಲಾ ರಸ್ತೆಗಳು ಅಭಿವೃದ್ಧಿಯಾಗಬೇಕೆಂಬ ಉದ್ದೇಶದಿಂದ ಗ್ರಾಮೀಣ ಭಾಗದ ರಸ್ತೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಪ್ರಸ್ತುತÀ ಎಲ್ಲಾ ರಸ್ತೆಗಳಿಗೂ ಕನಿಷ್ಟ 5ಲಕ್ಷ ರೂ.ಗಳನ್ನು ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡುವದಾಗಿ ತಿಳಿಸಿದರು.

ಈ ಸಂದÀರ್ಭ ಬಾಣಾವರ ಊರೊಳಗೆ ಹೋಗುವ ರಸ್ತೆ ದುರಸ್ತಿ, ಯಡುಂಡೆ ಗ್ರಾಮದ ಬಿ.ಆರ್ ಶಿವಪ್ಪನ ಮನೆಯಿಂದ ಕೆ.ಎಂ ತಿಮ್ಮಯ್ಯನ ಮನೆಗೆ ಹೋಗುವ ರಸ್ತೆ ಡಾಂಬರೀಕರಣ, ಗೋಣಿಮರೂರು ಪ್ರೌಢಶಾಲೆಯಿಂದ ಗಣಪತಿ ದೇವಸ್ಥಾನದ ರಸ್ತೆ ಡಾಂಬರೀಕರಣ, ಗಣಗೂರು ಪ್ರಕಾಶನ ಮನೆಯಿಂದ ಕೆ.ಎಂ. ನಾಗೇಶ್ ಮನೆಗೆ ಹೋಗುವ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಯಿತು.

ಇದರೊಂದಿಗೆ ಉಂಜಿಗನಹಳ್ಳಿಯ ಮೇದುರ ಚಿನ್ನಪ್ಪನ ಮನೆಯಿಂದ ಭುವನರವರ ಮನೆ ಕಡೆ ರಸ್ತೆ ಡಾಂಬರೀಕರಣ, ಮೋರಿಕಲ್ಲು ಬಸವನಹಳ್ಳಿ ಲಾರೆನ್ಸ್ ಪಿಂಟೋರವರ ಮನೆಯಿಂದ ಗಣೇಶನ ಮನೆವರೆಗೆ ರಸ್ತೆ ಡಾಂಬರೀಕರಣ, ನಾಗಾವಾಲದಿಂದ ಬಾಣಾವರಕ್ಕೆ ತೆರಳುವ ರಸ್ತೆ ಡಾಂಬರೀಕಣ, ಸೋಮವಾರಪೇಟೆ ಗೋಣಿ ಮಾರೂರು ಬಸವೇಶ್ವರ ಸಮುದಾಯ ಭವನದವರೆಗೆ ಹೋಗುವ ರಸ್ತೆಗೆ ಶಾಸಕರು ಭೂಮಿಪೂಜೆ ನೆರವೇರಿಸಿದರು.

ನಂತರ ಸುರೇಶ್ ಮನೆಕಡೆ ಹೋಗುವ ರಸ್ತೆ ಮಳೆಯಿಂದ ಹಾನಿಯಾದ ಭಾಗ, ಕೊರಳುಕೆರೆ ಸಮೀಪ ರಸ್ತೆ ಬದಿ ಕುಸಿದಿರುವ ಭಾಗಕ್ಕೆ ತಡೆಗೋಡೆ ನಿರ್ಮಾಣ, ಸೋಮವಾರಪೇಟೆ-ಬಾಣಾವಾರ- ಶನಿವಾರಸಂತೆ ಮುಖ್ಯ ರಸ್ತೆಯಿಂದ ಸಂಗಯ್ಯನಪುರ ಅಂಗನವಾಡಿ ಮುಖಾಂತರ ದೊಡ್ಡಳ್ಳಿಗೆ ಹೋಗುವ ರಸ್ತೆ ದುರಸ್ತಿ, ಸೋಮವಾರಪೇಟೆ, ಬಾಣಾವಾರ, ಶನಿವಾರಸಂತೆ ಮುಖ್ಯ ರಸ್ತೆಯಿಂದ ಸಂಗಯ್ಯನಪುರ ಕೆದಂಬಾಡಿ ಈರಪ್ಪನ ಮನೆವರೆಗೆ ರಸ್ತೆ ದುರಸ್ತಿ, ಸಂಗಯ್ಯನಪುರ ರಸ್ತೆಯ ಪಂಪ್ ಹೌಸ್ ಸಮೀಪ ಕುಸಿದಿರುವ ಭಾಗಕ್ಕೆ ತಡೆಗೋಡೆ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಈ ಸಂದÀರ್ಭ ತಾ.ಪಂ. ಸದಸ್ಯೆ ಸವಿತ ಈರಪ್ಪ, ಗ್ರಾ.ಪಂ. ಅಧ್ಯಕ್ಷೆ ಸವಿತ ಸುಕುಮಾರ್, ಗ್ರಾ.ಪಂ ಉಪಾಧ್ಯಕ್ಷ ವಿರೂಪಾಕ್ಷ, ಸದಸ್ಯ ಮಂಜುನಾಥ್, ದೇವಾಲಯ ಸಮಿತಿ ಅಧ್ಯಕ್ಷ ಪುಟ್ಟಪ್ಪ, ಪ್ರಮುಖರುಗಳಾದ ಮೋಹನ್, ನಾಗಣ್ಣ, ಅಭಿಯಂತರ ಕೀರ್ತನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.