ಗುಡ್ಡೆಹೊಸೂರು, ಫೆ. 25: ಇಲ್ಲಿನ ಯುವ ಬ್ರಿಗೇಡ್ ವತಿಯಿಂದ ಇಲ್ಲಿನ ದೇವಸ್ಥಾನ ಆವರಣ ಮತ್ತು ಹಾರಂಗಿ ರಸ್ತೆಯಲ್ಲಿ ಸಂಪೂರ್ಣ ಕಸವನ್ನು ತೆಗೆದು ಸ್ವಚ್ಛಗೊಳಿಸಲಾಯಿತು. ಯುವ ಬ್ರಿಗೇಡ್ ವತಿಯಿಂದ ತಿಂಗಳ ಪ್ರತಿ ಭಾನುವಾರ ಗುಡ್ಡೆಹೊಸೂರಿನ ಸುತ್ತಮುತ್ತಲಿನ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ಯುವ ಬ್ರಿಗೇಡ್‍ನ ಚಕ್ರವರ್ತಿ ಸೂಲಿಬೇಲೆ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯ ನಡೆಸಲಾಗುತ್ತಿದೆ. ಸ್ವಚ್ಛತಾ ಕಾರ್ಯದಲ್ಲಿ ಸ್ಥಳೀಯರಾದ ಬಟ್ಟುಮನೆ ರಮೇಶ್, ನಿತೀನ್, ಚಿನ್ನಪ್ಪ, ಉಮೇಶ್ ಹಾಜರಿದ್ದರು. ಸಾರ್ವಜನಿಕರು ಮತ್ತು ಪ್ರವಾಸಿಗರು ಎಲ್ಲೆಂದರಲ್ಲಿ ಕಸವನ್ನು ಬಿಸಾಡದೆ ಸ್ವಚ್ಛತೆಯನ್ನು ಕಾಪಾಡುವಂತೆ ಈ ಸಂದರ್ಭ ಬ್ರೀಗೇಡ್‍ನ ಸದಸ್ಯರು ಮನವಿ ಮಾಡಿಕೊಂಡರು.