ವೀರಾಜಪೇಟೆ, ಫೆ. 25: ಪಾನಮತ್ತನಾಗಿ ಆಟೋ ಚಾಲನೆ ಮಾಡುತ್ತಿದ್ದ ಸನ್ನು ಕುಮಾರ್ ಎಂಬಾತನಿಗೆ ಇಲ್ಲಿನ ಪ್ರಿನ್ಸಿಪಲ್ ಮುನ್ಸಿಪ್ ನ್ಯಾಯಾಲಯದ ನ್ಯಾಯಾಧೀಶರು ರೂ. 10,500 ದಂಡ ವಿಧಿಸಿದ್ದಾರೆ.ತಾ. 23 ರಂದು ರಾತ್ರಿ ಸನ್ನುಕುಮಾರ್ ಪಾನಮತ್ತನಾಗಿ ಆಟೋ ರಿಕ್ಷಾ (ಕೆ.ಎ. 12 ಬಿ 1478)ನ್ನು ಇಲ್ಲಿನ ದೊಡ್ಡಟ್ಟಿ ಚೌಕಿ ಬಳಿ ಚಾಲಿಸುತ್ತಿದ್ದಾಗ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಮರಿಸ್ವಾಮಿ ಪತ್ತೆಹಚ್ಚಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದರು.