ಶನಿವಾರಸಂತೆ, ಫೆ. 24: ಭೀಮ ಎಂದೇ ಅರಣ್ಯ ಇಲಾಖೆಯವರು ನಾಮಕರಣ ಮಾಡಿರುವ ದಷ್ಟ-ಪುಷ್ಟವಾದ ಕಾಡಾನೆಯೊಂದು ಎರಡು ದಿನದ ಹಿಂದೆ ಹಾಡಹಗಲೇ ಬಿಳಾಹ ಆನೆ ಗೇಟಿನ ಬಳಿ ಪ್ರತ್ಯಕ್ಷವಾಗಿ ಜನತೆಯಲ್ಲಿ ಆತಂಕ ಸೃಷ್ಟಿಸಿತು.

ವಿಚಾರ ತಿಳಿದ ಶನಿವಾರಸಂತೆ ಅರಣ್ಯ ವಲಯಾಧಿಕಾರಿ ಕೊಟ್ಟೇಶ್ ಹಾಗೂ ಅರಣ್ಯ ಸಿಬ್ಬಂದಿಗಳಾದ ಸತೀಶ್, ಶಿವರಾಜ್, ರಾಮಕೃಷ್ಣ, ಪ್ರಕಾಶ್, ಕಾಳಿಂಗಪ್ಪ, ರಮೇಶ್, ಹರೀಶ್ ಹಾಗೂ ಇತರ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಪಟಾಕಿ ಸಿಡಿಸಿ ಕಾಡಾನೆಯನ್ನು ಯಸಳೂರು ಮೀಸಲು ಅರಣ್ಯದ ಕಡೆಗೆ ಓಡಿಸುವ ಕಾರ್ಯಾಚರಣೆ ಕೈಗೊಂಡರು.