ಶನಿವಾರಸಂತೆ, ಫೆ. 24: ಶನಿವಾರಸಂತೆ ಸಮೀಪದ ಹುಲುಸೆ ಗ್ರಾಮದ ಯುತ್ ಪ್ಲಾಂಟರ್ಸ್ ರಿಕ್ರಿಯೇಶನ್ ಕ್ಲಬ್ ಯಾವುದೇ ಪರವಾನಿಗೆ ಇಲ್ಲದೆ ಮದ್ಯಪಾನ ಮಾಡಲು ಅನುವು ಮಾಡಿಕೊಟ್ಟ ಹಿನ್ನೆಲೆಯಲ್ಲಿ ಕ್ಲಬ್‍ನ ಒಳಗಡೆ ಮದ್ಯಪಾನ ಮಾಡುತ್ತಿದ್ದ ಆರೋಪಿಗಳಾದ ಕ್ಲಬ್‍ನ ಕಾರ್ಯದರ್ಶಿ ಸೇರಿದಂತೆ 9 ಮಂದಿ ಆರೋಪಿಗಳನ್ನು ಶನಿವಾರಸಂತೆ ಪೊಲೀಸರು ಬಂಧಿಸಿ ಜಾಮೀನಿನಡಿ ಬಿಡುಗಡೆ ಮಾಡಿದ್ದಾರೆ.