ವೀರಾಜಪೇಟೆ, ಫೆ. 24 : ಕಳೆದ ಎರಡು ಕೆಲವು ತಿಂಗಳ ಹಿಂದೆ ಇಲ್ಲಿನ ಸಾರಿಗೆ ಸಂಸ್ಥೆಯ ಬಸ್ಸು ನಿಲ್ದಾಣದಲ್ಲಿ ಪ್ರಾರಂಭಿಸ ಲಾದ ಸರಕಾರದ ಇಂದಿರಾ ಕ್ಯಾಂಟೀನ್ನಲ್ಲಿ ಅಪರಾಹ್ನದ ಊಟಕ್ಕಿಂತಲೂ ಬೆಳಗಿನ ಉಪಹಾರಕ್ಕೆ ಬೇಡಿಕೆ ಹೆಚ್ಚಾಗಿದೆ ವೀರಾಜಪೇಟೆ ಪ. ಪಂ. ಸದಸ್ಯ ಎಸ್. ಎಚ್. ಮತೀನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಂದಿರಾ ಕ್ಯಾಂಟೀನ್ನಲ್ಲಿ ಶುಚಿತ್ವ ಹಾಗೂ ಆಹಾರದ ಗುಣಮಟ್ಟವನ್ನು ಮುಂದುವರೆಸುವಂತೆ ಹೇಳಿದರು. ಸರಕಾರದ ನಿಗಧಿಯ ಪ್ರಕಾರ ಬೆಳಿಗ್ಗೆ 200 ಮಂದಿಗೆ ಉಪಹಾರ, ಅಪರಾಹ್ನ 200 ಹಾಗೂ ರಾತ್ರಿ 200 ಮಂದಿಗೆ ಟೋಕನ್ ನಿಗಧಿಪಡಿಸಿದ್ದರೂ ಬೆಳಗಿನ ಉಪಹಾರಕ್ಕೆ 350ಕ್ಕೂ ಅಧಿಕ ಬೇಡಿಕೆ ಇರುವುದಾಗಿ ಗುತ್ತಿಗೆದಾರರು ತಿಳಿಸಿದರು.